Header Ads
Breaking News

ಕರಾವಳಿಯಲ್ಲಿ ಬಿರುಗಾಳಿ, ಸಿಡಿಲು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

ಕೇರಳದ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ಬಿರುಸಿನ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಈ ದಿನಗಳಲ್ಲಿ ಮೀನುಗಾರಿಕೆಗೆ ಸಮುದ್ರಕ್ಕಿಳಿಯಬಾರದು. ಈಗಾಗಲೇ ಸಮುದ್ರಕ್ಕೆ ತೆರಳಿದ ಮಂದಿ ತಕ್ಷಣ ವಾಪಸಾಗುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಮುನ್ಸೂಚನೆ ನೀಡಿದ್ದಾರೆ.

ಮೀನುಗಾರಿಕಾ ವಲಯಗಳ ಆರಾಧನಾಲಯಗಳಲ್ಲಿ, ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಈ ಸಂಬಂಧ ಎಚ್ಚರಿಕೆ ಘೋಷಣೆ ಮೊಳಗಿಸುವಂತೆ ತಿಳಿಸಲಾಗಿದೆ. ಈ ಅವಧಿಯಲ್ಲಿ 1.5 ಮೀಟರ್‍ನಿಂದ 2.2 ಮೀಟರ್‍ವರೆಗಿನ ಎತ್ತರದಲ್ಲಿ ತೆರೆ ಅಪ್ಪಳಿಸುವುದರ ಜತೆಗೆ ಸಮುದ್ರ ಕೊರೆತ ಭೀತಿಯಿದೆ.

ಮೀನುಗಾರರು ಏ.27ರಿಂದ ಹಿಂದು ಮಹಾಸಾಗರದ ಭೂಮಧ್ಯೆ ರೇಖೆ ಪ್ರದೇಶ, ಅದರ ಬಳಿ ಪೂರ್ವ-ಪಶ್ಚಿಮ ಬಂಗಾಳ ಒಳಕಡಲು, ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ತೆರಳದಿರುವಂತೆ ಸೂಚನೆ ನೀಡಲಾಗಿದೆ. ಆಳಸಮುದ್ರಕ್ಕೆ ಈಗಾಗಲೇ ತೆರಳಿದವರು ಏ.27ರಂದು ಮಧ್ಯರಾತ್ರಿ 12 ಗಂಟೆಗೆ ಸಮೀಪದ ಯಾವುದಾದರೂ ದಡ ಸೇರುವಂತೆ ಸಲಹೆ ನೀಡಲಾಗಿದೆ.
ಲಕ್ಷದ್ವೀಪ, ಕೇರಳ ಕರಾವಳಿ ಸಮುದ್ರದಲ್ಲಿ ಏ.29ರವರೆಗೆ ಭಾರಿ ಗಾಳಿ ಬೀಸುವ ಸಾಧ್ಯತೆ ಇದ್ದು, ಆ ಭಾಗಕ್ಕೆ ಮೀನುಗಾರಿಕೆಗೆ ತೆರಳಿರುವ ಕರ್ನಾಟಕ ಕರಾವಳಿಯ ಮೀನುಗಾರರೂ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

Related posts

Leave a Reply

Your email address will not be published. Required fields are marked *