Header Ads
Breaking News

ಕರಾವಳಿಯಲ್ಲಿ ಮತ್ತೆ ಬಿರುಸುಗೊಂಡ ಮಳೆ. ಮೈದುಂಬಿ ಹರಿಯುತ್ತಿರುವ ನೇತ್ರಾವತಿ ಕುಮಾರಧಾರ ನದಿ.

ನೇತ್ರಾವತಿ ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿದ್ದು, ಉಭಯ ನದಿಗಳು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವರಣ ಪ್ರವೇಶಿಸಿ ಸಂಗಮವಾಗಲು ಎರಡು ಮೆಟ್ಟಿಲಷ್ಟೇ ಬಾಕಿದೆ.ನಿನ್ನೆ ರಾತ್ರಿ ಇಳಿಕೆಗೊಂಡಿದ್ದ ನದಿ ನೀರು ಮುಂಜಾನೆಯಾಗುತ್ತಲೇ ಏರಿಕೆಯಾಗತೊಡಗಿದವು. ಸುಮಾರು ಬೆಳಗಿನ10 ಗಂಟೆಯ ಸುಮಾರಿಗೆ ದೇವಸ್ಥಾನಕ್ಕೆ ನೀರು ಪ್ರವೇಶಿಸಲು ಎರಡು ಮೆಟ್ಟಿಲಷ್ಟು ಬಾಕಿ ಇದೆ. ಸ್ಥಳಕ್ಕೆ ಪುತ್ತೂರು ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದ್ದು, ಕಂದಾಯ ಇಲಾಖಾಧಿಕಾರಿಗಳು, ಗೃಹರಕ್ಷಕ ವಿಪತ್ತು ನಿರ್ವಹಣಾ ತಂಡದವರು ಹಾಗೂ ಪೊಲೀಸರು ಈಜು ತಜ್ಞರು ಸ್ಥಳದಲ್ಲಿ ಬೀಡಿ ಬಿಟ್ಟಿದ್ದಾರೆ. ಇನ್ನು ಶಿರಾಡಿ, ಗುಂಡ್ಯದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆರೆ ನೀರು ಆವರಿಸಿದ್ದು, ಐದಾರು ಕಡೆಗಳಲ್ಲಿ ಹೆದ್ದಾರಿಗೆ ಪಕ್ಕದ ನದಿಯಿಂದ ನೀರು ನುಗ್ಗಿದೆ. ಹಲವು ಮನೆಗಳು ಜಲಾವೃತವಾಗುವ ಹಂತದಲ್ಲಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಉಂಟಾಗಿದ್ದ ರಾಷ್ಟ್ರೀಯ ಹೆದ್ದಾರಿ ನೆರೆ ಗಿಂತಲೂ ಅಧಿಕ ನೆರೆ ಏರುತ್ತ ಇದೆ. ಅಡ್ಡಹೊಳೆ, ಉದನೆ, ಶಿರಾಡಿ, ಎಂಜಿರ ಕಡೆಗಳಲ್ಲಿ ರಸ್ತೆಗೆ ನೀರು ನುಗ್ಗಿದೆ.

Related posts

Leave a Reply