Header Ads
Breaking News

ಕರಾವಳಿಯಲ್ಲಿ ವರುಣನ ಆರ್ಭಟ : ಉಳ್ಳಾಲ-ಉಚ್ಚಿಲ ಭಾಗಗಳಲ್ಲೂ ಹೆಚ್ಚಾದ ಕಡಲಿನ ಅಬ್ಬರ

ಮಂಗಳೂರು ನಗರದಲ್ಲೂ ಗುರುವಾರ ಬೆಳಗ್ಗೆ ಭರ್ಜರಿ ಮಳೆಯಾಗುತ್ತಿದ್ದು ರಸ್ತೆಗಳಲ್ಲಿ ನೀರು ತುಂಬಿ???ಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಸುರತ್ಕಲ್, ಬೈಕಂಪಾಡಿಯಿಂದ ಕೊಟ್ಟಾರದ ವರೆಗೆ ರಸ್ತೆಯಲ್ಲಿ ನೀರು ತುಂಬಿ ತುಳುಕುತ್ತಿದೆ. ಅಸಮರ್ಪಕ ಚರಂಡಿ ಅವ್ಯವಸ್ಥೆಯಿಂದಾಗಿ ಚರಂಡಿಯಲ್ಲಿ ನೀರು ಹರಿಯದೇ ರಸ್ತೆಯ ಮೇಲೆಯೇ ನೀರು ಹರಿಯುತ್ತಿದೆ. ಕರಾವಳಿ ತೀರ ಪ್ರದೇಶದಲ್ಲಿ ಕಡಲು ಅಬ್ಬರಿಸುತ್ತಿದ್ದು, ಕೆಲವು ಮನೆಗಳು ನೀರು ಪಾಲಾಗಿವೆ. ಕಡಲ ತೀರದ ಜನರು ಆತಂಕಿತರಾಗಿದ್ದಾರೆ. ಪಡೀಲ್‌ನಲ್ಲೂ ಅಂಡರ್ ಬ್ರಿಡ್ಜ್‌ನಲ್ಲಿ ಮಣ್ಣು ಕುಸಿತಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಬಳಿಕ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಲಾಯಿತು. ಉಳ್ಳಾಲ-ಉಚ್ಚಿಲ ಭಾಗಗಳಲ್ಲೂ ಕಡಲಿನ ಅಬ್ಬರ ಹೆಚ್ಚಾಗಿದ್ದು, ಮನೆಗಳು ಸಮುದ್ರಪಾಲಾಗಿದ್ದಲ್ಲದೇ ಜನತೆ ಆತಂಕದಲ್ಲಿದ್ದಾರೆ. ಇನ್ನು ಉಚ್ಚಿಲ ಸೋಮೇಶ್ವರದ ಭಟ್ಟಂಪಾಡಿಗೆ ಭೇಟಿ ನೀಡಿದ ಬಿಜೆಪಿ ಸಂಸದೀಯ ಮಂಡಳಿ ಸಚೇತಕರಾದ ನಳಿನ್ ಕುಮಾರ್ ಕಟೀಲ್‌ರವರು ಕಡಲು ಕೊರೆತದ ಪ್ರಭಾವವನ್ನು ವೀಕ್ಷಿಸಿ ಸಂತ್ರಸ್ತರಿಗೆ ಸರ್ಕಾರದ ಸಹಾಯಧನ ನೀಡುವ ಭರವಸೆ ನೀಡಿದರು.

Related posts

Leave a Reply

Your email address will not be published. Required fields are marked *