Header Ads
Breaking News

ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಹೋಳಿ ಹಬ್ಬದ ಆಚರಣೆ : ಬೆಂಕಿಯ ಉಂಡೆಯನ್ನು ಕತ್ತಲಿನಲ್ಲಿ ಎಸೆಯುವ ಆಚರಣೆ ರೋಚಕ

ದೇಶಾದ್ಯಂತ ಹೋಳಿ ಹಬ್ಬದ ಆಚರಣೆ ನಡೆಯುತ್ತಿದೆ. ಉತ್ತರ ಭಾರತದ ಕಡೆ ಒಬ್ಬರಿಗೊಬ್ಬರು ಬಣ್ಣದ ನೀರನ್ನು-ರಂಗಿನ ಪುಡಿಯನ್ನು ಎರಚಿ ಹೋಳಿ ಹಬ್ಬದ ಆಚರಣೆ ಮಾಡುತ್ತಾರೆ. ಕರ್ನಾಟಕ ಮತ್ತು ಕರಾವಳಿಯಲ್ಲಿ ಹೋಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಬೆಂಕಿ ಉಂಡೆಯನ್ನು ಎಸೆದು ಹಬ್ಬದ ಆಚರಣೆ ಮಾಡಿದ್ದಾರೆ.

ಮಟಪಾಡಿ ವ್ಯಾಪ್ತಿಯ ಚಪ್ಟೆಗಾರ್ ಸಮುದಾಯ ವಿಭಿನ್ನವಾಗಿ ಹೋಳಿ ಆಚರಣೆಯನ್ನು ಮಾಡಿದೆ. ಯಕ್ಷಗಾನವನ್ನು ಹೋಲುವ ವೇಷ ಧರಿಸುವ ಚಪ್ಟೆಗಾರ್ ಸಮುದಾಯದವರು ಸುತ್ತಮುತ್ತಲ ಮನೆಗಳಲ್ಲಿ ಅಂಗಡಿ ಮುಂಭಾಗದಲ್ಲಿ ಹೋಳಿ ಕುಣಿತವನ್ನು ಮಾಡುತ್ತಾರೆ. ಕೊನೆಗೆ ಮಟಪಾಡಿಯ ಗದ್ದೆಯಲ್ಲಿ ಹೋಲಿಕಾ ದಹನ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಸಮುದಾಯವನ್ನು ಬಿಟ್ಟು ಬೇರೆ ಸಮುದಾಯದ ಜನರನ್ನು ಈ ಆಚರಣೆಗೆ ಆಹ್ವಾನ ಮಾಡುತ್ತಾರೆ. ಪ್ರತಿಯೊಬ್ಬರ ಕೈಗೂ ತೆಂಗಿನ ಕಾಯಿಯನ್ನು ಕೊಡುತ್ತಾರೆ. ಆ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಬೆಂಕಿ ಹಚ್ಚಲಾಗುತ್ತದೆ. ಉರಿಯುವ ತೆಂಗಿನ ಕಾಯಿ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಎಸೆಯಲಾಗುತ್ತದೆ. ಬೆಂಕಿಯ ಉಂಡೆಯನ್ನು ಕತ್ತಲಿನಲ್ಲಿ ಎಸೆಯುವ ಆಚರಣೆ ಬಹಳ ರೋಚಕ. ತೆಂಗಿನಕಾಯಿಯ ಬೆಂಕಿ ನಂದಿದ ನಂತರ ಕಾಯಿಯನ್ನು ಒಡೆದು ಬೆಂದ ತೆಂಗಿನಕಾಯಿಯನ್ನು ಪ್ರಸಾದ ರೂಪದಲ್ಲಿ ಅಲ್ಲಿ ಸೇರಿದ್ದ ಭಕ್ತರಿಗೆ ವಿತರಿಸಲಾಗುತ್ತದೆ.

Related posts

Leave a Reply

Your email address will not be published. Required fields are marked *