Header Ads
Header Ads
Breaking News

ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ : ಯೇಸುವಿನ ಜನನ ಹಿನ್ನೆಲೆಯಲ್ಲಿ ಚರ್ಚ್‌ಗಳಲ್ಲಿ ವಿಶೇಷ ಪೂಜೆ

ಕರಾವಳಿಯಾದ್ಯಂತ ಕ್ರಿಸ್ಮಸ್ ಮೊದಲ ದಿನವಾದ ಸೋಮವಾರವೇ ಹಬ್ಬದ ದಿನ ಸಂಭ್ರಮ ತುಂಬಿದೆ. ಮಧ್ಯರಾತ್ರಿಯಲ್ಲಿ ಯೇಸುವಿನ ಜನನ ಹಿನ್ನೆಲೆಯಲ್ಲಿ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಕ್ರಿಸ್ ಮಸ್ ಜಾಗರಣೆಯನ್ನ ಆಚರಿಸಿದರು. ಸೋಮವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸುತ್ತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು.

ಮಾತ್ರವಲ್ಲದೆ ಚರ್ಚ್ ಗಳು ವರ್ಣಮಯ ದೀಪಗಳಿಂದ ಝಗಮಗಿಸಿದರೆ, ಸಮುದಾಯದವರ ಮನೆಗಳ ಮೂಲೆಗಳಲ್ಲಿ ವಿವಿಧ ಆಕಾರದ ಕ್ರಿಸ್ ಮಸ್ ನಕ್ಷತ್ರಗಳು ಸಂಭ್ರಮ ಕ್ಕೆ ಹೆಚ್ಚಿನ ಮೆರೆಗು ನೀಡಿದೆ.ಇನ್ನು ಮಂಗಳೂರಿನ ರೊಜಾರಿಯೋ ಕೆಥೆಡ್ರಲ್ ನಲ್ಲಿ ರಾತ್ರಿ ನಡೆದ ಸಂಭ್ರಮ ದ ಬಲಿಪೂಜೆಯಲ್ಲಿ ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಸಂದೇಶ ನೀಡಿದರು. ಧರ್ಮಪ್ರಾಂತ್ಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್.ನೊರೊನ್ಹಾ, ಕೆಥೆಡ್ರಲ್ ಪ್ರಧಾನ ಗುರು ಜೆ.ಬಿ.ಕ್ರಾಸ್ತಾ ಮತ್ತು ಇತರ ಗುರುಗಳು ಪಾಲ್ಗೊಂಡಿದ್ದರು.

Related posts

Leave a Reply