Header Ads
Breaking News

ಕರಾವಳಿಯಾದ್ಯಂತ ಭಾರೀ ಮಳೆ : ಬೆಳ್ತಂಗಡಿ ಪಟ್ರಮೆ ಗ್ರಾಮದಲ್ಲಿ 8 ಮನೆಗಳು ಜಲಾವೃತ

ಎರಡು ದಿನದ ಹಿಂದೆ ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮವು ಒಂದು, ಇಲ್ಲಿನ ಮಣಿಯೇರು ಎಂಬಲ್ಲಿ ನೇತ್ರವತಿ ಹಾಗೂ ಕಪಿಲಾ ನದಿ ಸೇರುವ ನದಿ ತೀರದಲ್ಲಿ ವಾಸಿಸುವ ಸುಮಾರು 8 ಮನೆಗಳು ಜಲವ್ರತ ಗೊಂಡಿದ್ದು ಅದರಲ್ಲಿ ಒಂದು ಮನೆ ಸಂಪೂರ್ಣ ನಾಶವಾಗಿದೆ, ಈ ಕುಟುಂಬಕ್ಕೆ ಕೂರಲು ನೆಲೆಯಿಲ್ಲದೆ ಆಶ್ರಯಕ್ಕಾಗಿ ಕಾಯುತ್ತಿದೆ, ಈಗಾಗಲೇ ಸಂಬಂದಿಕರ ಮನೆಯಲ್ಲಿ ವಾಸಿಸುತಿದ್ದು ಉಡಲು ಬಟ್ಟೆಯಿಲ್ಲದೆ ಒಂದು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ, ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಪಂಚಾಯ್ತ್ ಸದಸ್ಯ ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತ್ ಸದಸ್ಯ ಲಕ್ಶ್ಮೀ ನಾರಾಯಣ, ಬೆಳ್ತಂಗಡಿ ತಹಶೀಲ್ದಾರರು ಭೇಟಿ ನೀಡಿ ಸಾಂತ್ವನ ನೀಡಿ ಹೋಗಿದ್ದಾರೆ, ಸಂತ್ರಸ್ಥ ರಾದ ವಿಜಯ ಎಂಬವರು ಮಾತನಾಡಿ ನಮಗೆ ಕೂರಲು ಮನೆಯಿಲ್ಲ, ಕೂಡಲೇ ಪರಿಹಾರ ಒದಗಿಸಬೇಕು ಎಂದರು, ನಂತರ ಮಾತಾಡಿದ ಮುಗೇರ ಜನಾಂಗ ಜಾಗ್ರತಿ ಟ್ರಸ್ಟಿನ ಉಪಾಧ್ಯಕ್ಷರಾದ ಸದಾಶಿವ ನಿಡ್ಲೆ ಮಾತನಾಡಿ ಇಲ್ಲಿ ಮನೆಗಳು ಸಂಪೂರ್ಣ ನಾಶವಾಗಿದ್ದು, ಸರಿಯಾದ ಮಾರ್ಗವೂ ಇಲ್ಲದೆ ಜನರು ಕಂಗಾಲಾಗಿದ್ದಾರೆ ಎಂದರು, ಪಟ್ರಮೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಆನಂದ ಗೌಡ ಮಣಿಯೇರು ಮಾತನಾಡಿ ಇಲ್ಲಿಗೆ ರಸ್ತೆ ಹಾಗೂ ಇತರೆ ಸಮಸ್ಯೆಗಳಿಗೆ ಸಂಬಂಧ ಪಟ್ಟ ಜನ ಪ್ರತಿನಿಧಿಗಳು ಕೂಡಲೇ ಸ್ಪಂದಿಸಬೇಕು ಎಂದರು.

Related posts

Leave a Reply

Your email address will not be published. Required fields are marked *