Header Ads
Header Ads
Breaking News

ಕರಾವಳಿ ಉತ್ಸವದ ಭಾಗವಾಗಿ ಈ ಬಾರಿ ವಿಶೇಷವಾಗಿ ಮೊದಲ ಬಾರಿಗೆ ನದಿ ಉತ್ಸವ ನಡೆಯಲಿದೆ:ಸಸಿಕಾಂತ್ ಸೆಂಥಿಲ್ ಹೇಳಿಕೆ

ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆಯುವ ಕರಾವಳಿ ಉತ್ಸವದ ಭಾಗವಾಗಿ ಈ ಬಾರಿ ವಿಶೇಷವಾಗಿ ಮೊದಲ ಬಾರಿಗೆ ನದಿ ಉತ್ಸವ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

 ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಉತ್ಸವ ಜನವರಿ 12ಮತ್ತು 13ರಂದು ನಡೆಸಲು ತೀರ್ಮಾನಿಸಲಾಗಿದೆ. ನದಿ ಕಿನಾರೆಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಚಿಂತಿಸಿ ನದಿ ಉತ್ಸವ ಮಾಡಲಾಗುವುದು. ಈಗಾಗಲೇ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.ಡಿಸೆಂಬರ್ 21ರಿಂದ 30ರತನಕ ಕರಾವಳಿ ಉತ್ಸವ ನಡೆಯಲಿದ್ದು , ಡಿಸೆಂಬರ್ 28,29,30ರಂದು ಪಣಂಬೂರು ಬೀಚಿನಲ್ಲಿ ಬೀಚ್ ಉತ್ಸವ ನಡೆಯಲಿದೆ ಎಂದು ಹೇಳಿದರು.

ಇನ್ನು ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನತನಕ ಬೃಹತ್ ಮೆರವಣಿಗೆ ನಡೆಯಲಿದ್ದು, ವಸ್ತು ಪ್ರದರ್ಶನ ಹಾಗೂ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದಾರೆ. ಕರಾವಳಿ ಉತ್ಸವದ ಉದ್ಘಾಟನೆಯನ್ನ ಸಂಗೀತ ನಿರ್ದೇಶಕರಾದ ಗುರುಕಿರಣ್ ಉದ್ಘಾಟನೆ ಮಾಡಲಿದ್ದಾರೆ.ಕರಾವಳಿ ಉತ್ಸವ ಮೈದಾನ , ಕದ್ರಿ ಉದ್ಯಾನವನ , ಪಣಂಬೂರ್ ಬೀಚ್‌ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು. ಈ ವೇಳೆ ಪಣಂಬೂರು ಬೀಚ್ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಅವರು ಕರಾವಳಿ ಉತ್ಸವದ ಆಮಂತ್ರಣ ಪತ್ರಿಕೆ ಹಾಗೂ ಬೀಚ್ ಫೆಸ್ಟಿವಲ್ ಲೋಗೋ ಬಿಡುಗಡೆಗೊಳಿಸಿದರು.

Related posts

Leave a Reply