Header Ads
Header Ads
Breaking News

ಕರಾವಳಿ ಉತ್ಸವ ಬೀಚ್ ಫೆಸ್ಟಿವಲ್‌ಗೆ ಅದ್ಧೂರಿ ತೆರೆ

 ಪಣಂಬೂರು ಕಡಲ ಕಿನಾರೆಯಲ್ಲಿ ಭಾನುವಾರ ಸಂಜೆ ತಂಪಾದ ತಂಗಾಳಿಯಲ್ಲಿ ಪಡುವಣದಿ ಸೂರ್ಯನು ಅಸ್ತಮಿಸಲು ಅಣಿಯಾಗುತ್ತಿದ್ದಂತೆ, ಕಿಕ್ಕಿರಿದ ಜನಸ್ತೋಮದ ಹರ್ಷೋದ್ಧಾರದೊಂದಿಗೆ ಮೂರು ದಿನಗಳ ಕಾಲ ನಡೆಯುತ್ತಿದ್ದ ಬೀಚ್ ಫೆಸ್ಟಿವಲ್‌ಗೆ ಅದ್ಧೂರಿಯಾಗಿ ತೆರೆಬಿತ್ತು. ಈ ವೇಳೆ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ಲೈವ್ ಸಿಂಗಿಂಗ್ ನೆರೆದವರನ್ನ ಮತ್ತಷ್ಟು ಮನರಂಜಿಸಿತ್ತು.

ಪಣಂಬೂರು ಕಡಲ ಕಿನಾರೆ ಭಾನುವಾರ ಸಂಜೆ ರಂಗೇರಿತ್ತು. ಮುಸ್ಸಂಜೆಯ ತಂಪಾದ ತಂಗಾಳಿ, ಪಡುವಣದಿ ಲೀನವಾಗಲು ಸೂರ್ಯ ಅಣಿಯಾಗುತ್ತಿರುವ ಹೊತ್ತು ಕಿಕ್ಕಿರಿದ ಜನಜುಂಗಳಿಯ ನಡುವೆ ಮೂರು ದಿನಗಳ ಕಾಲ ನಡೆಯುತ್ತಿದ್ದ ಬೀಚ್ ಫೆಸ್ಟಿವಲ್ ತೆರೆ ಕಂಡಿತ್ತು. ದಕ್ಷಿಣ ಕನ್ನಡ ಕರಾವಳಿ ಉತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಬೀಚ್ ಫೆಸ್ಟಿವಲ್‌ನಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೇಕ್ಷಕರು ತಂಡೋಪ ತಂಡವಾಗಿ ಆಗಮಿಸಿದರು. ರವಿವಾರ ಮುಂಜಾನೆ ಯೋಗ ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು, ಸಾರ್ವಜನಿಕರು ಪಾಲ್ಗೊಂಡು ಯೋಗಭ್ಯಾಸ ನಡೆಸಿದರು. ಕಲಾವಿದರ ಕುಂಚದಿಂದ ಮೂಡಿದ ಮರಳು ಶಿಲ್ಪಗಳು, ಗಾಳಿಪಟ ಹಾರಾಟದಲ್ಲಿ ಸಾರ್ವಜನಿಕರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು , ನೀರಾಟದಲ್ಲಿ ನಿರತವಾಗಿ ಸಂತಸ ಅನುಭವಿಸಿದರು

 ಬೀಚ್ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ಕರಾವಳಿ ಭಾಗದಲ್ಲಿ ಸಾಧನೆ ಮಾಡಿದ ಶ್ರೇಷ್ಠ ಕರಾವಳಿ ಗೌರವ ಪ್ರಶಸ್ತಿಯನ್ನು ಪ್ರೋ. ಹಿಲ್ಡಾ ರಾಯಪ್ಪನ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ನೀಡಿ ಗೌರವಿಸಿದ್ರು.ಈ ವೇಳೆ ಮಾತನಾಡಿದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯು ಅಪಾರ ವಿಚಾರ ಪ್ರತಿಬಿಂಬಿಸುವ ಉತ್ಸವವಾಗಿದೆ, ಸೋದರತೆಭಾವೈಕ್ಯ ಬಿಂಬಿಸುವ ಸಂಸ್ಕೃತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಚ್ ಅನ್ನು ಬಳಸಿಕೊಂಡು ಆರ್ಥಿಕತೆಯನ್ನು ಬೆಳೆಸುವ ಪ್ರಯತ್ನವನ್ನು ಮಾಡಬೇಕೆಂದರು
ಸನ್ಮಾನ ಸ್ವೀಕಾರಿಸಿ ಮಾತನಾಡಿದ ಪ್ರೋ.ಹಿಲ್ಡಾ ರಾಯಪ್ಪನ್ ಅವರು, ಈ ತುಳುನಾಡು ದಕ್ಷಿಣಕನ್ನಡ ಬಹು ಸಂಸ್ಕೃತಿಯ ನೆಲೆಬೀಡಾಗಿ ನಿಂತಿವೆ. ಬಹುಭಾಷೆಯ ಸಂಸ್ಕೃತಿಕಯ ನೆಲೆಯಾಗಿದೆ ಎಂದರು.

ಸಾಮರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ , ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಮೀಷನರ್ ಶ್ರೀಕಾಂತ್ ರಾವ್, ಶಾಸಕ ಡಿ.ವೇದವ್ಯಾಸ್ ಕಾಮತ್, ಪಣಂಬೂರು ಬೀಚ್ ಸಿಇಒ ಯತೀಶ್ ಬೈಕಂಪಾಡಿ ಸೇರಿದಂತೆ ಇನ್ನಿತರರು ಉಪಸ್ಥಿತಿತರಿದ್ದರು. ಇನ್ನು ಬೀಚ್ ಫೆಸ್ಟಿವಲ್‌ನಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮದ ವಿಜೇತರಿಗೆ ಪ್ರಶಸ್ತಿಯನ್ನ ಗಣ್ಯರು ವಿತರಿಸಿದ್ರು. ಮಾತ್ರವಲ್ಲದೇ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ತಂಡದ ಲೈವ್ ಸಿಂಗಿಂಗ್ ನೆರೆದವರನ್ನ ಸಂಗೀತ ಲೋಕಕ್ಕೆ ಕೊಂಡೊಯಿತು. ಒಟ್ಟಿನಲ್ಲಿ ೩ ದಿನಗಳಿಂದ ಕಾಲ ಕರಾವಳಿ ಉತ್ಸವ ಅಂಗವಾಗಿ ನಡೆಯುತ್ತಿದ್ದ ಪಣಂಬೂರು ಬೀಚ್ ಫೆಸ್ಟಿವಲ್‌ಗೆ ತೆರೆಬಿತ್ತು. ಹಲವಾರು ಮಂದಿ ಪ್ರವಾಸಿಗರು ಬೀಚ್ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಪಟ್ಟದರು.

Related posts

Leave a Reply