Header Ads
Header Ads
Header Ads
Breaking News

ಕರಾವಳಿ ಕಾಂಗ್ರೆಸ್‌ನಲ್ಲಿ ಭಿನ್ನಮತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್‌ ಮತ್ತು ಸರ್ಕಾರದ ಮುಖ್ಯಸಚೇತಕ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರ ನಡುವಿನ ಭಿನ್ನಮತ ಬಯಲಾಗಿದೆ.

ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸ್ವಾಗತಿಸಲು ತೆರಳಿದ ಇಬ್ಬರು ನಾಯಕರ ಭಿನ್ನಮತ ಬಯಲಾಗಿದೆ. ಸಿಎಂ ಪಕ್ಕಕ್ಕೆ ಬರಲು ಯತ್ನಿಸಿದ ಡಿಸೋಜಾರನ್ನು ಜೈನ್‌ ತಳ್ಳಿದ್ದಾರೆ ಎಂದು ತಿಳಿದು ಬಂದಿದೆ.

ಡಿಸೋಜಾ ಅವರು ಹಾಲಿ ಅಭಯಚಂದ್ರ ಜೈನ್‌ ಅವರು ಪ್ರತಿನಿಧಿಸುತ್ತಿರುವ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಪರಸ್ಪರ ಭಿನ್ನಮತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಸಿಎಂ ಸ್ವಾಗತಿಸಲು ಭಾರೀ ಸಂಖ್ಯೆಯ ಕಾಂಗ್ರೆಸ್‌ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಸಿಎಂ ಕಾರು ಹತ್ತಬೇಕಾದರೆ ಸುತ್ತಲೂ ಮುತ್ತಿದ್ದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

 

Related posts

Leave a Reply