Header Ads
Header Ads
Header Ads
Breaking News

ಕರಾವಳಿ ಕಾಲೇಜಿನಲ್ಲಿ ಡಿಸೈನ್ ಫೆಸ್ತಾ ರಾಷ್ಟ್ರೀಯ ಮಟ್ಟದ ಯೂತ್ ಫೆಸ್ಟ್ ಉದ್ಘಾಟನೆ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಗಣೇಶ್ ರಾವ್‌ರಿಂದ ಚಾಲನೆ

ಮಂಗಳೂರು ಕರಾವಳಿ ಕಾಲೇಜು ಮತ್ತು ಕರಾವಳಿ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ರಾಷ್ಟ್ರೀಯ ಮಟ್ಟದ ಯೂತ್ ಫೆಸ್ಟ್ ಡಿಸೈನ್ ಫಿಯಾಸ್ತಾ ಕಾರ್ಯಕ್ರಮ ನಡೆಯಿತು.

ನೀರ್ ಮಾರ್ಗ ಸಮೀಪದ ಕರಾವಳಿ ಕಾಲೇಜು ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಶ್ರೀ ಎಸ್. ಗಣೇಶ್ ರಾವ್, ದೀಪ ಬೆಳಗಿಸಿ ಚಾಲನೆ ನೀಡಿದರು. ಹಾಗೂ ಟ್ರೋಫಿಯನ್ನು ಬಿಡುಗಡೆ ಮಾಡಿದರು.


ತದ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ನಾವು ತೆಗೆದುಕೊಳ್ಳುವಂತಹ ನಿರ್ಧಾರ ನಮ್ಮ ಮುಂದಿನ ಜೀವನಕ್ಕೆ ದಾರಿ ದೀಪ ಎಂದು ಹೇಳಿದರು,.

ಕಾರ್ಯಕ್ರಮದಲ್ಲಿ ಡಾ. ಹಿಮಾ, ಕರಾವಳಿ ಕಾಲೇಜು ಫಾರ್ಮಸಿ ವಿಭಾಗದ ಡಾ. ನಾರಾಯಣ ಶೆಟ್ಟಿ, ಕೆ.ಐ.ಟಿ ಡೀನ್ ಡಾ. ಅಮರ್‌ನಾಥ್ ಶೆಟ್ಟಿ, ಸ್ಟೂಡೆಂಟ್ ವೆಲ್‌ಫೇರ್ ಆಫೀಸರ್ ಫ್ರೊ. ಜುಶಾನ್, ಕರಾವಳಿ ಕಾಲೇಜು ಪ್ರಾಂಶುಪಾಲ ಪ್ರೊ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಫ್ಯಾಶನ್ ಶೋ ಮತ್ತು ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply