Header Ads
Header Ads
Breaking News

ಕರಾವಳಿ ಕಾಲೇಜಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ

ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ ಪ್ರತಿಷ್ಠಿತ ಕರಾವಳಿ ಕಾಲೇಜು ಆವರಣದಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.ದೀಪಾವಳಿ ಎಂದಾಕ್ಷಣ ನೆನಪಾಗುವುದು ಮನೆ ಮುಂದೆ ಉರಿಯುವ ಹಣತೆ. ಆಕಾಶದಲ್ಲಿ ಚಿಮ್ಮುವ ಬಾಣಬಿರುಸು ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು, ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ ಸಂಪ್ರದಾಯ, ಸಂಸ್ಕøತಿ ಇತಿಹಾಸವಿದೆ. ಅಂದ ಹಾಗೆ ಕರಾವಳಿ ಕಾಲೇಜಿನಲ್ಲೂ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಕಾಲೇಜಿನ ಆವರಣದಲ್ಲಿ ರಂಗೋಲಿ ರಚಿಸಿ, ಹಣತೆಯನ್ನು ಹೆಚ್ಚಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. 

ಕಾರ್ಯಕ್ರಮವನ್ನು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿಯ ಜಿ. ಆರ್. ಎಜ್ಯುಕೇಶನ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷರಾದ ಗಣೇಶ್ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿರು. ಆನಂತರ ಮಾತನಾಡಿದ ಅವರು, ದೀಪಾವಳಿ ಬೆಳಕಿನ ಹಬ್ಬ ಮತ್ತು ಬಣ್ಣಗಳ ಹಬ್ಬವಾಗಿದ್ದು, ನಮ್ಮ ಜೀವನದಲ್ಲಿ ಬರುವ ಎಲ್ಲ ಕಷ್ಟ ಮತ್ತು ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಹುಮ್ಮಸ್ಸಿನಿಂದ ಬದುಕುವುದೇ ನಿಜವಾದ ಹಬ್ಬಗಳ ಆಚರಣೆ ಎಂದು ಹೇಳಿದರು.ಇದೇ ವೇಳೆ ಕರಾವಳಿ ಕಾಲೇಜಿನ ವಿದ್ಯಾರ್ಥಿಗಳು ದೀಪಗಳ ಬೆಳಕಿನಲ್ಲಿ ಸಂಭ್ರಮಿಸಿದ್ದು ಮಾತ್ರವಲ್ಲ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನರಂಜಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭ ಜಿ. ಆರ್. ಎಜ್ಯುಕೇಶನ್ ಟ್ರಸ್ಟ್‍ನ ಲತಾ ಜಿ ರಾವ್ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

Leave a Reply