Header Ads
Header Ads
Header Ads
Breaking News

ಕರಾವಳಿ ಕಾಲೇಜಿನಲ್ಲಿ ರಾಷ್ಟ್ರೀಯ ಫಾರ್ಮಸಿ ವೀಕ್ 3 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ಮೂರನೇ ದಿನ ನಡೆದ ರಕ್ತದಾನ ಶಿಬಿರ

ಮಂಗಳೂರು ಕರಾವಳಿ ಕಾಲೇಜು ಆಫ್ ಫಾರ್ಮಸಿ ವತಿಯಿಂದ ರಾಷ್ಟ್ರೀಯ ಫಾರ್ಮಸಿ ವೀಕ್ ಅಂಗವಾಗಿ 3 ದಿನಗಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊನೆಯ ದಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಜಂಟಿಯಾಗಿ ರಕ್ತದಾನ ಶಿಬಿರ ನಡೆಯಿತು.


ವಾಮಂಜೂರು ಕರಾವಳಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಚಾಲನೆ ನೀಡಿದರು. ತದ ಬಳಿಕ ಮಾತನಾಡಿದ ಅವರು, ನಮ್ಮ ಜೀವನ ಜೀವವನ್ನು ಉಳಿಸಬೇಕಾದರೆ ರಕ್ತ ಅತೀ ಅಗತ್ಯ ಹಾಗಾಗಿ ಎಲ್ಲರೂ ರಕ್ತದಾನವನ್ನು ಮಾಡಬೇಕು ಎಂದು ಹೇಳಿದರು.

ತದ ಬಳಿಕ ಮಾತನಾಡಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿ‌ಅನ ವೈಸ್ ಡೀನ್ ಪದ್ಮಜಾ ಉದಯ್‌ಕುಮಾರ್, ಇದೊಂದು ಉತ್ತಮ ಕಾರು‌ಅ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಸ್ವಾಮಿ, ಡಾ, ಚಾರು ಉಪಸ್ಥಿತರಿದ್ದರು.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply