Header Ads
Header Ads
Breaking News

ಕರಾವಳಿ ತಾಳೆಬೆಳೆಗೆ ಸೂಕ್ತ ಪ್ರದೇಶ ,ತಾಳೆ ಬೆಳೆ ತುಂಬಾ ಲಾಭದಾಯಕ:ಶ್ರೀನಿವಾಸ್ ರಾವ್ ಹೇಳಿಕೆ

ಕರಾವಳಿಯಲ್ಲಿ ತಾಳೆಬೆಳೆಗೆ ಸೂಕ್ತ ಪ್ರದೇಶವಾಗಿದೆ. ಈ ಬೆಳೆ ತುಂಬಾ ಲಾಭದಾಯಕವಾಗಿತ್ತು. ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆಸಬೇಕು ಎಂದು ತಾಳೆ ಬೆಳೆಯ ಕೇಂದ್ರ ಸಮಿತಿಯ ಮುಖ್ಯಸ್ಥರಾದ ಶ್ರೀನಿವಾಸ ರಾವ್ ಹೇಳಿದರು.ಅವರು ಕಾರ್ಕಳದ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

ನಂತರ ಮಾತನಾಡಿದ ನೋಡಲ್ ಅಧಿಕಾರಿ ಶಿವಾನಂದ ಅವರು, ನಾವು ಕರಾವಳಿ ಭಾಗದಲ್ಲಿ ತಾಳೆಬೆಳೆ ಬಗ್ಗೆ ಪರಿಚಯಿಸಿ ಸುಮಾರು ಅವಧಿಗಳಾಗಿವೆ. ಈ ಯೋಜನೆ ಕೇಂದ್ರ ಸಹಕಾರಿಯಾಗಿದ್ದು ರಾಜ್ಯ ಸರಕಾರದ ಮುಖಾಂತರ ಅನುಷ್ಟಾನಕ್ಕೆ ತರಲಾಗುತ್ತದೆ. ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾಗುತ್ತದೆ ಜತೆಗೆ ಎಣ್ಣೆ ಬೇಡಿಕೆ ಹೆಚ್ಚಾಗುತ್ತದೆ ಆದುದರಿಂದ ನಾವು ಈ ಬೆಳೆಗೆ ಪ್ರೋತ್ಸಾಹ ನೀಡುತ್ತೇವೆ. ರೈತರಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಹಣ ಸಹಾಯ ಹಾಗೂ ಗೊಬ್ಬರವನ್ನು ನಾವು ನೀಡುತ್ತೇವೆ. ಕೇವಲ ೩ ವರ್ಷದಲ್ಲಿ ತಾಳೆ ಗಿಡದಲಿ ಹಣ್ಣು ಬರಲು ಪ್ರಾರಂಭವಾಗುತ್ತದೆ. ಅದನ್ನು ನಾವು ಒಳ್ಳೆ ಬೆಲೆ ಕೊಟ್ಟು ಖರೀದಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ತಾಳೆಬೆಳೆಗಾರರ ಸಂಘದ ಜಿ.ಎಸ್. ಯೋಗೀಶ್ ಭಟ್ ಅವರು, ನಾನು 3 ಎಕರೆ ಸ್ವಂತ ಜಾಗದಲ್ಲಿ ತಾಳೆಬೆಳೆ ಕೃಷಿ ಮಾಡಿದ್ದೇನೆ ತುಂಬಾ ಲಾಭದಾಯಕವಾಗಿದ್ದ ತಾಳೆ ಬೆಳೆ ನಿರ್ವಹಣೆ ತುಂಬಾ ಕಡಿಮೆ ಖರ್ಚಿನಲ್ಲಿ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಳೆ ಬೆಳೆ ಜಿಲ್ಲಾ ಅಧ್ಯಕ್ಷರಾದ ನರಸಿಂಹ ನಾಯ್ಕ, ಬಸವ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply