Header Ads
Header Ads
Breaking News

ಕರಾವಳಿ ಪಾಲಿಗೆ ಆಶಾದಾಯಕ ಬಜೆಟ್ : ಮೀನುಗಾರಿಕೆ, ಕೃಷಿಗೆ ಪ್ರೋತ್ಸಾಹ

ಸಿಎಂ ಕುಮಾರಸ್ವಾಮಿ ನಿನ್ನೆ2019-20 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಗೆ ಸಂಪೂರ್ಣ ಕರಾವಳಿಯನ್ನು ನಿರ್ಲಕ್ಷಿಸಿದ್ದ ಕುಮಾರಸ್ವಾಮಿ ಈ ಭಾರಿ ಆಶಾದಾಯಕವಾದ ಬಜೆಟ್ ಮಂಡಿಸುವ ಮೂಲಕ ಕರಾವಳಿಗರ ಆಕ್ರೋಶವನ್ನು ತಣಿಸಲು ಪ್ರಯತ್ನಿಸಿದ್ದಾರೆ.

ಕಳೆದ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಪರಿಣಾಮ ಕರಾವಳಿಯ ಮೀನುಗಾರರು ಸೇರಿದಂತೆ ಅನೇಕ ಸಮುದಾಯಗಳ ಪತಿಭಟನೆ, ವಿರೋಧ ಎದುರಿಸಬೇಕಾಯಿತು. ಆದ್ರೆ ಈ ಬಾರಿ ಅಂತಹ ವಿರೋಧ ಬಾರದಂತೆ ಎಚ್ಚರಿಕೆಯ ನಡೆಯನ್ನು ಇಟ್ಟಿದ್ದಾರೆ. ಪ್ರಮುಖವಾಗಿ ಮೀನುಗಾರಿಕಾ ಸಮುದಾಯಕ್ಕೆ ಖುಷಿ ಪಡಿಸಲು ಸಿಎಂ ಬಜೆಟ್ ಮೂಲಕ ಯತ್ನಿಸಿದ್ದಾರೆ. ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ೧೫ ಕೋಟಿ ಮೀಸಲಿಡಲಾಗಿದೆ. ಮಲ್ಪೆ ಬಂದರಿನಲ್ಲಿ ತ್ಯಾಜ್ಯ ನಿರ್ವಹಣ ಘಟಕ ನಿರ್ಮಾಣಕ್ಕೆ 15ಕೋಟಿ ಮೀಸಲಿಡಲಾಗಿದೆ. ಮೀನುಗಾರಿಕಾ ದೋಣಿಗಳಿಗೆ ಶೇ.50 ರಷ್ಟು ಸಹಾಯಧನ ಘೋಷಿಸಲಾಗಿದ್ದು ಇದು ಮೀನುಗಾರರ ಪಾಲಿಗೆ ಆಶಾದಾಯಕ ಬಜೆಟ್ ಆಗಿದೆ.

 ಕರಾವಳಿಯಲ್ಲಿ ಭತ್ತ ಬೆಳೆಯಲು ಹೆಚ್ಚಿನ ಪ್ರೋತ್ಸಾಹ, ಮಂಗನಕಾಯಿಲೆ ಔಷಧ ಅಭಿವೃದ್ದಿಗೆ5 ಕೋಟಿ ರೂ, ಕಡಲ ತೀರದ ಪ್ರವಾಸೋದ್ಯಮಕ್ಕೆ7 ಕೋಟಿ ರೂ ಅನುದಾನ ಸೇರಿದಂತೆ ಅನೇಕ ಸಮುದಾಯಗಳ ಅಭಿವೃದ್ದಿಗೆ, ಸಮುದಾಯ ಭವನ ನಿರ್ಮಾಣಕ್ಕೆ ಭರಪೂರ ಕೊಡುಗೆಯನ್ನು ಕುಮಾರಣ್ಣ ಬಜೆಟ್ ನಲ್ಲಿ ಘೋಷಿಸಲಾಗಿದ್ದು ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಆಶಾದಾಯಕವಾಗಿದೆ. ಉಡುಪಿಯಲ್ಲೂ ಬಜೆಟ್ ಬಗ್ಗೆ ಹೆಚ್ಚಿನ ವಿರೋಧ ಕಂಡು ಬಂದಿಲ್ಲ.

ಒಟ್ಟಿನಲ್ಲಿ ಕುಮಾರಣ್ಣ ಬಜೆಟ್ ಕರಾವಳಿ ಪಾಲಿಗೆ ಆಶಾದಾಯಕವಾಗಿದೆ. ಕೃಷಿ, ಮೀನುಗಾರಿಕೆ ಹೀಗೆ ಹಲವು ವಿಚಾರದಲ್ಲಿ ಬಜೆಟ್ ಕರಾವಳಿಗೆ ಆಶಾದಾಯಕವಾಗಿದೆ. ಈ ಮೂಲಕ ಕಳೆದ ಬಜೆಟ್ ನ ಮೂಲಕ ಕರಾವಳಿಗರ ವಿರೋಧ ಎದುರಿಸಿದ್ದ ಕುಮಾರಸ್ವಾಮಿ ಈ ಬಾರಿ ಮಾತ್ರ ಎಚ್ಚರಿಕೆ ನಡೆ ಇಟ್ಟದ್ದಂತು ಸತ್ಯ.

Related posts

Leave a Reply