Header Ads
Header Ads
Breaking News

ಕರಾವಳಿ ಪ್ರದೇಶದಲ್ಲಿ ಮಳೆಯ ಅಬ್ಬರ. ಗಾಳಿ ಮಳೆಗೆ ತೇಲಿಹೋದ ದೋಣಿ, ಬೋಟುಗಳು. ಒಂದು ಕೋಟಿಗೂ ಅಧಿಕ ನಷ್ಟ.

ಶಿರೂರು: ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೈಂದೂರು ವ್ಯಾಪ್ತಿ ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಳೆಯ ಅಬ್ಬರದ ಪರಿಣಾಮವಾಗಿ ಮೀನುಗಾರರಿಗೆ ಹಾಗೂ ಕೃಷಿಕರಿಗೆ ಅಪಾರ ನಷ್ಟ ಉಂಟುಮಾಡಿದೆ. ಶಿರೂರು ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ ಆರು ದೋಣಿ ಹಾಗೂ ಎರಡು ಪರ್ಷಿಯನ್ ಬೋಟ್ ನೀರಿನಲ್ಲಿ ಕೊಚ್ಚಿ ಹೋಗಿ ಸಮುದ್ರ ಪಾಲಾಗಿದೆ.

ಇವುಗಳು ಇಲ್ಲೆ ಸಮೀಪದ ಕಳಿಹಿತ್ಲು ಕಡಲ ಕಿನಾರೆಯ ದಡಕ್ಕೆ ತೇಲಿ ಬಂದಿಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಹರಸಾಹಸದಿಂದ ದೋಣಿಗಳನ್ನು ಹಗ್ಗ ಕಟ್ಟಿ ರಕ್ಷಿಸಿದ್ದಾರೆ.ದೋಣಿ ಹಾಗೂ ಇಂಜಿನ್ ಸಂಪೂರ್ಣ ಹಾನಿಯಾಗಿದ್ದು ಸುಮಾರು ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮೀನುಗಾರರ ಮುಖಂಡರು ತಿಳಿಸಿದ್ದಾರೆ.

Related posts

Leave a Reply