Header Ads
Breaking News

ಕರಾವಳಿ ಬಿಜೆಪಿಯನ್ನು ಎಂದಿಗೂ ಕೈಬಿಟ್ಟಿಲ್ಲ : ಬಿಜೆಪಿ ಸ್ಟಾರ್ ಕ್ಯಾಂಪೇನರ್ ತಾರಾ

ಉಳ್ಳಾಲ: ಕರಾವಳಿ ಬಿಜೆಪಿಯನ್ನು ಎಂದಿಗೂ ಕೈಬಿಟ್ಟಿಲ್ಲ, ಮಂಗಳೂರಿನಲ್ಲಿ ಪೂರ್ಣ ಬಿಜೆಪಿ ಹವಾ ಇದೆ. ಎಲ್ಲಿ ಹೋದರೂ ಮೋದಿ ಯವರ ಗುಣಗಾನ ಕೇಳಿಬರುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಹಾಗೂ ಚಿತ್ರನಟಿ ತಾರಾ ಹೇಳಿದರು. ಅವರು ಮಂಗಳೂರು ಕ್ಷೇತ್ರದ ಮಾಡೂರು ಸಮೀಪದ ಸೋವೂರು ತಿಂಡಿ ಕಾರ್ಖಾನೆಯ ಕಾರ್ಮಿಕರ ಜತೆಗೆ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಗುರುವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯ ಸಂಸದರು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ತೊಕ್ಕೊಟ್ಟು ಮತ್ತು ಪಂಪ್ ವೆಲ್ ಫ್ಲೈಓವರ್ ಅನುಷ್ಠಾನಗೊಳಿಸುವುದೇ ದೊಡ್ಡ ಸಾಧನೆಯಾಗಿತ್ತು. ಅದನ್ನು ಸಂಸದರು ಮಾಡಿ ತೋರಿಸಿದ್ದಾರೆ. ಆದರೆ ಕೆಲವು ತೊಂದರೆಗಳಿಂದ ಕಾಮಗಾರಿ ವಿಳಂವಾಗಿದೆ. ಕೈ ಎಂದರೆ ಕೈಕೊಟ್ಟು ಹೋಗುವ ಪಕ್ಷವಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಜಿಲ್ಲಾ ಪ್ರಮುಖ್ ಸುಲೋಚನಾ ಭಟ್, ಸಹಪ್ರಮುಖ್ ಗಳಾದ ಜಿಲ್ಲಾ ಮಹಿಳಾ ಮೋರ್ಛಾ ಅಧ್ಯಕ್ಷೆ ಪೂಜಾ ಪೈ, ಮನಪಾ ಸದಸ್ಯೆ ರೂಪ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ ಸದಸ್ಯ ರವಿಶಂಕರ್ ಮತ್ತಿರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *