Header Ads
Breaking News

ಕರಿಂಜೆ ಶ್ರೀ ಕ್ಷೇತ್ರದಲ್ಲಿ ಬ್ಯಹ್ಮಕಲಶೋತ್ಸವ ಧಾರ್ಮಿಕ ಸಭೆ

ಮೂಡುಬಿದಿರೆ : ದೇವಸ್ಥಾನ ಎಂಬುದು ಒಂದು ಆಲಯ. ದೇವಸ್ಥಾನ, ದೈವಸ್ಥಾನ ಹಾಗೂ ಭಜನಾ ಮಂದಿರಗಳನ್ನು ನಾವು ಕಟ್ಟಿದರೆ ಸಾಲದು ಮನಸು-ಮನಸುಗಳನ್ನು ಮತ್ತು ಭಾವನೆಗಳನ್ನು ಕಟ್ಟುವಂತಹ ಕೆಲಸಗಳಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಹಾಗೂ ಜಾತ್ರಾ ಮಹೋತ್ಸವದಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶಿರ್ವನ ನೀಡಿದರು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸನ್ಯಾಸ ಪ್ರದರ್ಶನ ಆಗಬಾರದು ನಿದರ್ಶನವಾಗಬೇಕು ಅದು ಕರಿಂಜೆ ಕ್ಷೇತ್ರದಲ್ಲಿ ಆಗಿದೆ. ದೇವಸ್ಥಾನಕ್ಕೆ ಒಂದು ಸಲ ಹೋದ ಕಲ್ಲು ಶಿಲೆಯಾಗುತ್ತದೆ. ಆದರೆ ಮನುಷ್ಯರು ದೇವಸ್ಥಾನಕ್ಕೆ ಸಾವಿರ ಸಲ ಹೋದರೂ ಉತ್ತಮ ಮನುಷ್ಯರಾಗಲು ಸೋತಿದ್ದೇವೆ ಇದು ದುರಂತ ಎಂದು ಹೇಳಿದರು.

ಖಂಡಿಗ ರಾಮದಾಸ ಆಸ್ರಣ್ಣ ಅವರು ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಯವರನ್ನು ಮಾರೂರು ಖಂಡಿಗ ಮನೆತನದ ಪರವಾಗಿ `ಧರ್ಮಕಾರ್ಯ ಧುರೀಣ’ ಬಿರುದು ನೀಡಿ ಗೌರವಿಸಿದರು.

ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕೆ ಕೊಡುಗೆ ನೀಡಿರುವ ದಾನಿಗಳಾದ ಸುಧೀರ್ ಹೆಗ್ಡೆ ಬೈಲೂರು, ನಿತ್ಯಾನಂದ ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ಡಾ.ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಶಶಿಧರ ಶೆಟ್ಟಿ ಬರೋಡ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಕೊಂಡೆವೂರು ಶ್ರೀ ನಿತ್ಯಾನಂದ ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಜಿಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಪಣ್ಣ, ದಾವಣಗೆರೆ ಮಹಾನಗರ ಪಾಲಿಕೆಯ ನಿವೃತ್ತ ಸಹಾಯಕ ನಿರ್ದೇಶಕ ನಾಗರಾಜ ಎಂ, ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರೋಹಿತ ವಿಠಲ್ ಭಟ್ ನಂದಳಿಕೆ, ಉದ್ಯಮಿ ಕೆ.ಶ್ರೀಪತಿ ಭಟ್, ಸ್ವಾಗತ ಸಮಿತಿಯ ಸಂಚಾಲಕ ಕೆ. ಕೃಷ್ಣರಾಜ ಹೆಗ್ಡೆ, ಆರ್ಥಿಕ ಸಮಿತಿಯ ಸಂಚಾಲಕ ಸುದರ್ಶನ್ ಎಂ., ರೋಹನ್ ಅತಿಕಾರಿಬೆಟ್ಟು, ಕೇಶವ ಕುಂದರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *