Header Ads
Header Ads
Breaking News

ಕರೀಂ ಮೌಲಾವಿ ಹತ್ಯೆಗೆ ಯತ್ನ ಪ್ರಕರಣ:ರಾಜಾರೋಷವಾಗಿ ತಿರುಗಾಡುತ್ತಿರುವ ಆರೋಪಿಗಳು

ಶಬರಿಮಲೆ ಮಹಿಳಾ ಪ್ರವೇಶದ ವಿಚಾರವಾಗಿ ಸಂಘ ಪರಿವಾರ ನಡೆಸಿದ ಹರತಾಳದ ಮಧ್ಯೆಯೇ ಕರೀಂ ಮೌಲಾವಿಯವರ ಹತ್ಯೆಗೆ ಯತ್ನಿಸಿದ್ದರು. ಇದೀಗ ಆ ಆರೋಪಿಗಳು ರಾಜಾರೋಷವಾಗಿ ತಿರುಗಾಡಲು ಸಹಕಾರ ನೀಡುತ್ತಿರುವ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಂಜೇಶ್ವರದ ಪಿಡಿಪಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಬಶೀರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಂಜೇಶ್ವರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಚಿಕಿತ್ಸೆಯಲ್ಲಿರುವ ಕರೀಂ ಮೌಲವಿಯವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕೆಂದು ಈ ಮೊದಲು ಪಿಡಿಪಿ ಮುಖ್ಯ ಮಂತ್ರಿಯವರಿಗೂ ಹಾಗೂ ಇತರ ಸಚಿವರಿಗೂ ಮನವಿಯ ಮೂಲಕ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಯವರು ಇದೀಗ ಕರೀಂ ಮೌಲವಿಯವರ ಚಿಕಿತ್ಸಾ ವೆಚ್ಚವನ್ನು ಪರಿಗಣಿಸಲಾಗುವುದಾಗಿ ವಿಧಾನ ಸಭೆಯಲ್ಲಿ ವಾಗ್ದಾನವನ್ನು ನೀಡಿರುವುದನ್ನು ಪಿಡಿಪಿ ತುಂಬು ಹೃದಯದಿಂದ ಸ್ವಾಗತಿಸಿರುವುದಾಗಿ ಬಶೀರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ನೇತಾರರಾದ ಎಂ.ಕೆ ಅಬ್ಬಾಸ್, ಅಬ್ದುಲ್ ರಹ್ಮಾನ್ ಪುತ್ತಿಗೆ, ಕೆ ಪಿ ಮೊಹಮ್ಮದ್ ಜಾಸಿರ್ ಪೊಸೋಟು, ಪಿ ಪಿ ಶಂಶುದ್ದೀನ್ ಬಾಯಾರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply