Header Ads
Header Ads
Breaking News

ಕರೋಪಾಡಿ ಎಸ್‌ವೈಎಸ್, ಎಸ್‌ಎಸ್‌ಎಫ್ ಶಾಖೆಯ ವಾರ್ಷಿಕೋತ್ಸವ : ನೂತನ ಸುನ್ನೀ ಸೆಂಟರ್‌ನ ಉದ್ಘಾಟನೆ

ವಿಟ್ಲ: ಕರೋಪಾಡಿ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ಶಾಖೆಯ ವಾರ್ಷಿಕೋತ್ಸವ, ನೂತನ ಸುನ್ನೀ ಸೆಂಟರ್ ಉದ್ಘಾಟನೆ, ಜೀಲಾನಿ, ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ನಡೆಯಿತು.

ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನಗೊಂಡಿತು. ಶಾಕೀರ್ ಬಾಖವಿ ಮಂಬಾಡ್ ಮುಖ್ಯ ಪ್ರಭಾಷಣ ಮಾಡಿದರು. ಕರೋಪಾಡಿ ಉಸ್ತಾದ್ ಅಬ್ದುಲ್ ಹಕೀಂ ಮದನಿ ಉದ್ಘಾಟಿಸಿದರು.

ಸುನ್ನೀ ಸೆಂಟರ್ ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿದ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ಅವರು ಕರೋಪಾಡಿ ಭಾಗದಲ್ಲಿ ಧಾರ್ಮಿಕ ಕೇಂದ್ರಗಳು ನಿರಂತರವಾಗಿ ಕಾರ್ಯಾಚರಿಸುತ್ತಿದೆ. ಸುನ್ನೀ ಸೆಂಟರ್‌ಗಳ ಮೂಲಕ ಧಾರ್ಮಿಕ ಭಕ್ತಿ ಜನರಲ್ಲಿ ಹೆಚ್ಚಾಗಿ ಮೂಡಲಿದೆ. ಪ್ರತಿಯೊಬ್ಬರು ಧಾರ್ಮಿಕ ಅಡಿಯಲ್ಲಿ ಜೀವನ ನಡೆಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿ ಯುವ ಸಮುದಾಯದಿಂದ ಈ ಭಾಗದಲ್ಲಿ ಧಾರ್ಮಿಕ ಕೇಂದ್ರಗಳು ನೆಲೆನಿಂತಿದೆ. ಊರಿನ ಹಿರಿಯರ, ಕಾರ್ಯಕರ್ತರ ಪರಿಶ್ರಮದಿಂದ ಸುನ್ನೀ ಸೆಂಟರ್ ನಿರ್ಮಾಣಗೊಂಡಿದೆ. ತಂದೆತಾಯಿಗಳನ್ನು ಗೌರವದಿಂದ ಕಾಣಬೇಕು. ಅವರನ್ನು ದಿಕ್ಕರಿಸಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಸುನ್ನೀ ಸೆಂಟರ್‌ಗಳ ಮೂಲಕ ಧಾರ್ಮಿಕತೆಯನ್ನು ಉಳಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಅಬೂಬಕ್ಕರ್ ಫೈಝಿ ಸುನ್ನೀ ಫೈಝಿ ಪೆರುವಾಯಿ, ಸಿದ್ದಿಕ್ ಸಖಾಫಿ ಆವಳಂ, ಕರೋಪಾಡಿ ಎಸ್‌ವೈಎಸ್ ಅಧ್ಯಕ್ಷ ಪಿ.ಎಂ ಅಬೂಬಕ್ಕರ್ ಸಅದಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್ ಸಅದಿ, ಅಬ್ದುಲ್ ಹಮೀದ್ ಸಖಾಫಿ ಪಾಡಿ, ಅಶ್ರಫ್ ಸಖಾಫಿ ಉರ್ಣಿ, ಅಬ್ದುಲ್ ಖಾದರ್ ಸಅದಿ ಕಾಡೂರು, ಮಹಮ್ಮದ್ ಶರೀಫ್ ಮದನಿ ಪೆರುವಾಯಿ, ಎಂಕೆಎಂ ಕಾಮಿಲ್ ಸಖಾಫಿ, ಕೊಡುಂಗಾಯಿ, ಅಬ್ದುಲ್ ಖಾದರ್ ಸಅದಿ ಕನ್ಯಾನ, ಎಂಐಎಂ ಅಶ್ರಫ್ ಸಖಾಫಿ, ದಾವೂದ್ ಸಅದಿ, ಇಸ್ಮಾಯಿಲ್ ಮದನಿ, ಮೊಹಿದು ಕುಟ್ಟಿ ಹಾಜಿ ಕರೋಪಾಡಿ, ಆಶಿಕ್ ಬಾಕಿಮಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply