Header Ads
Header Ads
Breaking News

ಕರೋಪಾಡಿ ಗ್ರಾ. ಪಂ. ಮರುಚುನಾವಣೆ, ಜಲೀಲ್ ಸಹೋದರ ಮಹಮ್ಮದ್ ಅನ್ವರ್‌ಗೆ ಗೆಲುವು

ಕರೋಪಾಡಿ ಗ್ರಾ. ಪಂ. ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಅವರ ಹತ್ಯೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬುಧವಾರ ಬೆಳಿಗ್ಗೆ ಬಿ. ಸಿ. ರೋಡಿನಲ್ಲಿ ನಡೆದಿದ್ದು ಜಲೀಲ್ ಸಹೋದರ ಎ. ಮಹಮ್ಮದ್ ಅನ್ವರ್ ಗೆಲುವು ಸಾಧಿಸಿದ್ದಾರೆ.
ಒಟ್ಟು ೭೯೦ ಮತಗಳು ಚಲಾವಣೆಯಾಗಿದ್ದು ಜಲೀಲ್ ೪೪೯ ಮತಗಳನ್ನು ಪಡೆದುಕೊಂಡಿದ್ದರೆ ಅವರ ಪ್ರತಿಸ್ಪರ್ಧಿ ಹರೀಶ್ ಕೆ. ೩೨೦ ಮತಗಳನ್ನು ಗಳಿಸಿದರು. ೨೧ ಮತ ಅಸಿಂಧುವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ಅಬ್ದುಲ್ ಜಲೀಲ್ ಹತ್ಯೆಯ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಜುಲೈ ೨ರಂದು ಮತದಾನ ನಡೆದಿತ್ತು. ಬಿ. ಸಿ. ರೋಡಿನ ಚುನಾವಣಾ ಶಾಖೆಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆಯವರ ಉಪಸ್ಥಿತಿಯಲ್ಲಿ ಅಧಿಕಾರಿಗಳು ಮತ ಎಣಿಕೆ ನಡೆಸಿಕೊಟ್ಟರು. ಬೆಳಿಗ್ಗೆ ೮ ಗಂಟೆಯ ವೇಳೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದು ೯ ಗಂಟೆಗೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು ಅಭ್ಯರ್ಥಿಯ ವಿಜಯವನ್ನು ಘೋಷಿಸಲಾಯಿತು. ವಿಟ್ಲ ಠಾಣಾ ಎಸ್‌ಐ ನಾಗರಾಜ್, ಬಂಟ್ವಾಳ ಅಪರಾಧ ವಿಭಾಗದ ಎಸೈ ಗಂಗಾಧರಪ್ಪ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು.
ಈ ಸಂದರ್ಭ ಸುದ್ದಿಗಾರರೊಂಗೆ ಮಾತನಾಡಿದ ಅನ್ವರ್ ಈ ವಿಜಯವನ್ನು ತನ್ನ ಮೃತ ಸಹೋದರನ ಆತ್ಮಶಾಂತಿಗಾಗಿ ಅರ್ಪಿಸುತ್ತೇನೆ ಎಂದು ತಿಳಿಸಿ ಭಾವುಕರಾದರು. ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸಿದರು. ಮಹಮ್ಮದ್ ಅನ್ವರ್ ಬೆಂಬಲಿಗರು ಹಾರ ಹಾಕಿ ಸಂಭ್ರಮ ಪಟ್ಟರು.

Related posts

Leave a Reply