Header Ads
Header Ads
Breaking News

ಕರೋಪಾಡಿ ಶಾಖೆಯ ಎಸ್‌ವೈಎಸ್, ಎಸ್‌ಎಸ್‌ಎಫ್ ವಾರ್ಷಿಕೋತ್ಸವ – ಜ.4 ರಂದು ಸುನ್ನೀ ಸೆಂಟರ್ ಕಟ್ಟಡದ ಉದ್ಘಾಟನಾ ಸಮಾರಂಭ

ಕರೋಪಾಡಿ ಶಾಖೆಯ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ವಾರ್ಷಿಕೋತ್ಸವ, ನೂತನ ಸುನ್ನೀ ಸೆಂಟರ್ ಕಟ್ಟಡದ ಉದ್ಘಾಟನಾ ಸಮಾರಂಭ, ಜೀಲಾನಿ, ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಇದೇ 4ರ ಶುಕ್ರವಾರ ಸಂಜೆ ಕರೋಪಾಡಿ ಮಸೀದಿ ಬಳಿ ನಡೆಯಲಿದೆ ಎಂದು ಎಸ್‌ವೈಎಸ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ಸಅದಿ ಕರೋಪಾಡಿ ಅವರು ತಿಳಿಸಿದರು.

ಅವರು ಕರೋಪಾಡಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಈ ಭಾಗದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಐತಿಹಾಸಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಭಾಗದಲ್ಲಿ 150ಕ್ಕಿಂತಲೂ ಅಧಿಕ ಕಾರ್ಯಕರ್ತರು ಕೆಲಸ ಮಾಡುತ್ತಿದ್ದು, 10 ಲಕ್ಷ ರೂ. ವೆಚ್ಚದಲ್ಲಿ ಸುನ್ನೀ ಸೆಂಟರ್ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದರು.

ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ಹಾಗೂ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಸುನ್ನೀ ಸೆಂಟರ್ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಫ್ ಕರೋಪಾಡಿ ಘಟಕ ಅಧ್ಯಕ್ಷ ಪಿ.ಎಂ ಅಬೂಬಕ್ಕರ್ ಸಅದಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರೋಪಾಡಿ ಜುಮಾ ಮಸೀದಿ ಉಸ್ತಾದ್ ಅಬ್ದುಲ್ ಹಕೀಂ ಮದನಿ ಉದ್ಘಾಟಿಸಲಿದ್ದಾರೆ. ಶಾಕೀರ್ ಬಾಖವಿ ಮಂಬಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಕನ್ಯಾನ ಪ್ರಭಾಷಣ ಮಾಡಲಿದ್ದಾರೆ. ಸಯ್ಯಿದ್ ಶಂಸುದ್ದೀನ್ ತಂಙಳ್ ಗಾಂಧಿನಗರ್, ಇಬ್ರಾಹಿಂ ಫೈಝಿ ಕನ್ಯಾನ, ಅಬೂಬಕ್ಕರ್ ಫೈಝಿ ಕನ್ಯಾನ, ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು, ಮೂಸಲ್ ಮದನಿ, ಇಬ್ರಾಹಿಂ ಮದನಿ, ಮಹಮ್ಮದ್ ಮದನಿ, ಸಿದ್ದೀಖ್ ಸಖಾಫಿ, ಮಹಮ್ಮದ್ ಸಖಾಫಿ, ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಝೀಜ್ ಕರೋಪಾಡಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಕರೋಪಾಡಿ, ಕೆ.ಎಂ ಶರೀಫ್ ಜೀವನ್‌ಧಾರ, ಇಸ್ಮಾಯಿಲ್ ಎಂ.ಕೆ ಉಪಸ್ಥಿತರಿದ್ದರು.

Related posts

Leave a Reply