Header Ads
Header Ads
Breaking News

ಕರ್ನಾಟಕದ ಮೀನುಗಳಿಗೆ ಗೋವಾ ಸರ್ಕಾರ ನಿಷೇಧ ವಿಚಾರ: ವಾಪಸ್ ಪಡೆಯಬೇಕೆಂದು ಮನವಿ

 ಕರ್ನಾಟಕದ ಮೀನುಗಳಿಗೆ ಗೋವಾ ಸರ್ಕಾರ ನಿಷೇಧ ಹೇರಿರುವುದನ್ನು ವಾಪಸ್ ಪಡೆಯಬೇಕು ಎಂದು ನಿಯೋಗದ ಮೂಲಕ ತೆರಳಿ ಮನವಿ ಮಾಡಿದ್ದೇವೆ ಎಂದು ಮಾಜಿ ಶಾಸಕ ಯು ಆರ್ ಸಭಾಪತಿ ಹೇಳಿದ್ರೂ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋವಾ ಸರಕಾರ ರಾಜ್ಯದ ಮೀನುಗಳಿಗೆ ನಿಷೇಧ ಹೇರಿರುವುದರಿಂದ ಮೀನುಗಾರರಿಗೆ ತುಂಬಾ ಕಷ್ಟವಾಗಿದೆ. ಗೋವಾ ರಾಜ್ಯದ ಮೀನುಗಾರಿಕಾ ಸಚಿವ ಹಾಗೂ ಆರೋಗ್ಯ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಪರಾಮರ್ಶಿಸಬೇಕು ಎಂದು ಆಗ್ರಹಿಸಿದ್ದೇವೆ ಅಲ್ಲದೆ ರಾಸಾಯನಿಕ ಮಿಶ್ರಿತ ಮೀನು ಬಂದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿ ಕ್ರಮ ಕೈಗೊಳ್ಳಿ ಬದಲಾಗಿ ನಿಷೇಧ ಹೇರುವುದು ಸರಿಯಲ್ಲ ಎಂದು ಮನವರಿಕೆ ಮಾಡಿದ್ದೇವೆ ಆದರೆ ಗೋವಾ ರಾಜ್ಯದ ನಿಲುವು ಬೇರೆಯಾಗಿದ್ದು ನಾವು ಮೀನಿಗೆ ನಿಷೇಧವನ್ನು ಹೇರಿಲ್ಲ ಬದಲಾಗಿ ಕೆಲವೊಂದು ನಿಬಂಧನೆಗಳನ್ನು ಇಟ್ಟಿದ್ದೇವೆ ಅದರಲ್ಲಿ ಪ್ರಮುಖವಾಗಿ ಶೀತಲೀಕೃತ ವಾಹನದಲ್ಲಿ ಮೀನುಗಳನ್ನು ಸಾಗಾಟ ಮಾಡುವುದು. ಆದರೆ ಈ ಶೀತಲೀಕರಣ ವಾಹನ ಬಲು ದುಬಾರಿಯಾಗಿದ್ದು ಮುನ್ನೂರು ಕಿಲೋಮೀಟರ್ ಅಂತರದಲ್ಲಿ ಶೀತಲೀಕೃತ ವಾಹನಗಳಲ್ಲಿ ಮೀನುಗಳನ್ನು ಸಾಗಾಟ ಮಾಡುವುದು ತುಂಬಾ ದುಬಾರಿಯಾಗುವುದು ಎಂದರು.

Related posts

Leave a Reply