Header Ads
Header Ads
Breaking News

ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಅಸೋಸಿಯೇಷನ್ ಕೆಎಚ್‍ಎಸ್‍ಎಲ್‍ಎ ನ 11ನೇ ವಾರ್ಷಿಕ ಸಮ್ಮೇಳನ

ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಅಸೋಸಿಯೇಷನ್ (ಕೆಎಚ್‍ಎಸ್‍ಎಲ್‍ಎ) ಯೇನೆಪೊಯ  ವಿಶ್ವವಿದ್ಯಾಲಯ ದೇರಳಕಟ್ಟೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಅಸೋಸಿಯೇಷನ 11 ವಾರ್ಷಿಕ ಸಮ್ಮೇಳನ ಕೆಎಚ್‍ಎಸ್‍ಎಲ್‍ಎ-2019 ದೇರಳಕಟ್ಟೆಯ ಯೇನೆಪೊಯ  ವೈದ್ಯಕೀಯ ಕಾಲೇಜಿನ ಒಳಾಂಗಣ ಸಭಾಂಗಣದಲ್ಲಿ ನಡೆಯಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ನ ವಿವಿಯ ಕುಲಪತಿ ಡಾ. ಎಸ್. ಸಚ್ಚಿದಾನಂದ ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಅಸೋಸಿಯೇಷನ್ ಇದರ 11 ವಾರ್ಷಿಕ ಸಮ್ಮೇಳನ ಕೆಎಚ್‍ಎಸ್‍ಎಲ್‍ಎ -2019ಕ್ಕೆ ಚಾಲನೆ ನೀಡಿದರು.

ನಂತರ ಕುಲಪತಿ ಡಾ. ಎಸ್. ಸಚ್ಚಿದಾನಂದ ಮಾತನಾಡಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವತಿಯಿಂದ ಶೀಘ್ರದಲ್ಲೇ ಸೆಂಟರ್ ಫಾರ್ ಹೆಲ್ತ್ ಇನ್ಫಾರ್ಮೆಟಿಕ್ಸ್ ಅನ್ನು ಆರಂಭಿಸಲಾಗುವುದು. ಈ ಮೂಲಕ ರಾಜ್ಯದ ವೈದ್ಯ ವಿದ್ಯಾರ್ಥಿಗಳು ಎಲ್ಲಾ ರೀತಿಯ ಮಾಹಿತಿಗಳನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು ಸೆಂಟರ್ ಫಾರ್ ಹೆಲ್ತ್ ಇನ್ಫಾರ್ಮಾಟಿಕ್ಸ್ ಸ್ಥಾಪನೆ ಮೂಲಕ ಎಲ್ಲಾ ಮಾಹಿತಿಗಳುಳ್ಳ ವ್ಯವಸ್ಥೆಗಳು ಒಂದೇ ರೂಫಿನಲ್ಲಿ ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದರು.

ನಿಮ್ಹಾನ್ಸ್ ಬೆಂಗಳೂರಿನ ಲೈಬ್ರರಿ ಮತ್ತು ಮಾಹಿತಿ ವಿಭಾಗದ ನಿವೃತ್ತ ಪ್ರಾಂಶುಪಾಲ  ಪ್ರೊ.ಎಚ್ .ಎಸ್. ಸಿದ್ದರಾಮಲ್ಲಯ್ಯ ದಿಕ್ಸೂಚಿ ಭಾಷಣದಲ್ಲಿ ಗ್ರಂಥಾಲಯ ಎಂಬುದು ಒಂದು ಜ್ಞಾನ ಭಂಡಾರ. ಪುಸ್ತಕ ಒದುವ ಅಭ್ಯಾಸ ಒಳ್ಳೆಯದು. ಪುಸ್ತಕ ಓದುವ ಅಭ್ಯಾಸವಿದ್ದವರು ಹೆಚ್ಚುವರಿಯಾಗಿ ಒಬ್ಬ ಮಿತ್ರನನ್ನು ಸಂಪಾದಿಸಿದಂತೆ. ಯಾವುದೇ ವಿಷಯ ಶೋಧನೆಗೆ ಗ್ರಂಥಾಲಯದ ಬದಲಿಗೆ ಗೂಗಲ್‍ಗೆ ಮೊರೆ ಹೋಗುತ್ತಿದ್ದಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಮುಖ್ಯ ಗ್ರಂಥಪಾಲಕ ಬಸವಲಿಂಗಪ್ಪ ಎಸ್.ಕೆ. ಅವರನ್ನು ಸಮ್ಮಾನಿಸಲಾಯಿತು.ಯೇನೆಪೊಯ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಂ.ವಿಜಯ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರುಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಅಸೋಸಿಯೇಷನ 11 ವಾರ್ಷಿಕ ಸಮ್ಮೇಳನದ ಪ್ರಯುಕ್ತ ಮುದ್ರಿಸಿದ ಕೆಎಚ್‍ಎಸ್‍ಎಲ್‍ಎ – 2019 ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಲಾಯಿತು

ಮುಖ್ಯ ಅತಿಥಿಯಾಗಿ  ಯೇನೆಪೊಯ ವಿಬಿ ಸಹ ಕುಲಪತಿ ಪ್ರೊ. ಸಿ.ವಿ. ರಘುವೀರ್, ಕೆಎಚ್‍ಎಸ್‍ಎಲ್‍ಎ ಸಂಯೋಜಕ ಡಾ. ಕೆ.ಎಸ್. ಗಂಗಾಧರ್ ಸೋಮಯಾಜಿ, ಕೆಎಚ್‍ಎಸ್‍ಎಲ್‍ಎ ಅಧ್ಯಕ್ಷ ಡಾ.ಪಿ.ಎಸ್. ಮಹೇಶ್, ಕಾರ್ಯದರ್ಶಿ ಡಾ. ವೆಂಕಟೇಶ್, ಆಯೋಜನ ಸಮಿತಿ ಕಾರ್ಯದರ್ಶಿ ಡಾ. ಮಮತಾ ಪ್ರಮೋದ್ ಕುಮಾರ್, ಡಾ. ರೋಶೆಲ್ ಟೆಲ್ಲಿಸ್ ಮತ್ತು ಡಾ. ಮಲ್ಲಿಕಾ ಶೆಟ್ಟಿ ಭಾಗವಹಿದ್ದರು.

Related posts

Leave a Reply

Your email address will not be published. Required fields are marked *