Breaking News

ಕರ್ನಾಟಕ ಕೇಡರ್‌ನ ಐ‌ಎ‌ಎಸ್ ಅಧಿಕಾರಿ ಅನುರಾಗ್ ತಿವಾರಿ, ಲಖನೌ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆ

ಉತ್ತರ ಪ್ರದೇಶದ ರಾಜಧಾನಿ ಲಖನೌದ ರಸ್ತೆ ಬದಿಯಲ್ಲಿ ಐ‌ಎ‌ಎಸ್ ಅಧಿಕಾರಿಯೊಬ್ಬರ ಶವ ಪತ್ತೆಯಾಗಿದೆ.
ಕರ್ನಾಟಕ ಕೇಡರ್ನ ಐ‌ಎ‌ಎಸ್ ಅಧಿಕಾರಿ ಅನುರಾಗ್ ತಿವಾರಿ ಮೃತ ದೇಹ ಮಂಗಳವಾರ ಪತ್ತೆಯಾಗಿದ್ದು ಇದೊಂದು ನಿಗೂಢ ಸಾವು ಎಂದು ಪೊಲೀಸರು ಹೇಳಿದ್ದಾರೆ. ಲಖನೌನಿಂದ ೧೩೦ ಕಿಮೀ ದೂರದಲ್ಲಿರುವ ಬಹರೈಚ್ ನಿವಾಸಿಯಾದ ತಿವಾರಿ ೨೦೦೭ರಲ್ಲಿ ಸಿವಿಲ್ ಸರ್ವೀಸ್ ಸೇರಿದ್ದರು.
ಲಖನೌ ನಗರದ ಹಜ್ರತ್ಗಂಜ್ ಪ್ರದೇಶದಲ್ಲಿರುವ ಮೀರಾ ಭಾಯಿ ಅತಿಥಿಗೃಹ ಬಳಿ ಮೃತದೇಹ ಪತ್ತೆಯಾಗಿದೆ. ತಿವಾರಿ ಅವರು ಕಳೆದ ಎರಡು ದಿನಗಳಿಂದ ಅತಿಥಿಗೃಹದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಮೃತದೇಹ ಬಿದ್ದಿರುವುದನ್ನು ನೋಡಿ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Related posts

Leave a Reply