Header Ads
Header Ads
Breaking News

ಕರ್ನಾಟಕ ಕ್ರಿಸ್ಟಿಯನ್ ಎಜುಕೇಶನಲ್ ಸೊಸೈಟಿ ಬಲ್ಮಠ:”ಕಾಸೆಸ್ 50ಸಾಮರಸ್ಯ-2019″ ವಸ್ತು ಪ್ರದರ್ಶನ ಮತ್ತು ಮಾರಾಟ.

ಕರ್ನಾಟಕ ಕ್ರಿಸ್ಟಿಯನ್ ಎಜುಕೇಶನಲ್ ಸೊಸೈಟಿ ಬಲ್ಮಠ, ಮಂಗಳೂರು ಇದರ ವತಿಯಿಂದ “ಕಾಸೆಸ್ 50 ಸಾಮರಸ್ಯ-2019” ವಸ್ತು ಪ್ರದರ್ಶನ ಮತ್ತು ಮಾರಾಟ ಅದ್ದೂರಿಯಾಗಿ ನಡೆಯಿತು.ಹೌದು ಕಾಸೆಸ್ ಸಂಸ್ಥೆ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪೆಬ್ರವರಿ 1,2,3ರಂದು ಮೂರುದಿನಗಳ ಕಾಲ ಎಲ್ಲಾ ಜಾತಿ ಧರ್ಮದೊಂದಿಗೆ ಸಾಮರಸ್ಯ ಬೆಸೆಯುವ ಉದ್ದೇಶದಿಂದ ನಡೆಯಲಿರುವ ಈ ಕಾರ್ಯಕ್ರಮದ ಅಂಗವಾಗಿ ನಗರದ ಬಲ್ಮಠದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ವಸ್ತು ಪ್ರದರ್ಶನ ನಡೆಯಿತು.ಈ ವಸ್ತು ಪ್ರದರ್ಶನದಲ್ಲಿ ಸ್ವಾತಂತ್ರ್ಯ ಪೂರ್ವದ ಅಪೂರ್ವ ಪ್ರಕಟಣೆಗಳು,ಚರಿತ್ರೆ ಹೇಳುವ ಚಿತ್ರಗಳು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ “ಸಾರ ತುಳು ಬೂಕುಲೆ” ಪ್ರದರ್ಶನ ಮತ್ತು ಮಾರಾಟ, ತುಳು ಬೈಬಲ್ ತರ್ಜುಮೆ ಪುಸ್ತಕ, ಬೈಬಲ್ ಸೊಸೈಟಿ ಬೆಂಗಳೂರಿನಿಂದ ವಿವಿಧ ಭಾಷೆಯ ಬೈಬಲ್ ಪ್ರದರ್ಶನ ಮತ್ತು ಮಾರಾಟ, ಇದರಲ್ಲಿ ಕೆ.ಪಿ.ರೈ.ಬೆಳ್ಳಿಪಾಡಿಯವರ ಸಂಗ್ರಹದ ಹಳೆಯ ಕಾಲದ ಪೆನ್ ಗಳು, ನಾಣ್ಯಗಳು, ವಿವಿಧ ದೇಶದ ನೋಟುಗಳು ಮತ್ತು ಹಳೆ ಕಾಲದಲ್ಲಿ ಬಳಸುತ್ತಿದ್ದ ಅನೇಕ ಗ್ರಹಪಯೋಗಿ ಪರಿಕರಗಳ ಪ್ರದರ್ಶನ ವಿಶೇಷವಾಗಿತ್ತು.ಈ ವೇಳೆ ಕರ್ನಾಟಕ ಥಿಯೋಲೋಜಿಲ್ ಕಾಲೇಜಿನ ಗ್ರಂಥಾಲಯ ಸಹಾಯಕರಾದ ಬೆನೆಟ್ ಜಿ.ಅಮನ್ನಾ ಮಾತನಾಡಿ ಕಾಸೆಸ್ ಸಂಸ್ಥೆ ನಡೆದುಬಂದ ಹಾದಿ ಮತ್ತು ಈ ಸಂಸ್ಥೆಯು ೫೦ ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಎನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಬಳಿಕ ಹಳೆ ವಸ್ತುಗಳ ಸಂಗ್ರಾಹಕ ಕೆ.ಪಿ.ರೈ.ಬೆಳ್ಳಿಪಾಡಿಯವರು ಮಾತನಾಡಿ ನನ್ನ ಬಳಿ ಇರುವ ಸಂಗ್ರಹದ ಅರ್ಧದಷ್ಟು ಇಲ್ಲಿ ಇರಿಸಿದ್ದೇವೆ.ಇಂದಿನ ಯುವ ಜನತೆಗೆ ಇದೆ ಬಗ್ಗೆ ತಿಳಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.

Related posts

Leave a Reply