Header Ads
Header Ads
Breaking News

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಸಾಧನೆ 2016-17ನೇ ಸಾಲಿನಲ್ಲಿ 2.26 ನಿವ್ವಳ ಲಾಭ ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ನಾಯಕ್ ಮಾಹಿತಿ

 

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ರಾಜ್ಯ ಸರ್ಕಾರದ ಒಂದು ಉದ್ಯಮವಾಗಿದ್ದು, ಅನೇಕ ಏಳು ಬೀಳುಗಳನ್ನು ಕಂಡು ಇದೀಗ ೨೦೧೬-೧೭ರಲ್ಲಿ ೪೩೬ ಲಕ್ಷದಷ್ಟು ಲಾಭವಾಗಿದೆ. ಆದರೆ ೨೦೧೬-೧೭ರಲ್ಲಿ ಪೂರ್ತಿ ಹೊಂದಾಣಿಕೆಯಾಗಿ ಶೂನ್ಯವಾಗಿದ್ದು, ಒಟ್ಟಾರೆ ನಿಗಮವು ಸಂಚಿತ ನಷ್ಟ ಕಳೆದು ೨.೨೬ ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ ಎಂದು ಚೇರ್‌ಮೆನ್ ರಾಜೇಂದ್ರ ನಾಯಕ್ ತಿಳಿಸಿದರು.


ಅವರು ಮಂಗಳೂರಿನ ಹೊಯಿಗೆ ಬಜಾರ್ ನೊಂದಾಯಿತ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ೨೦೦೩-೦೪ರಲ್ಲಿ ನಷ್ಟದಲ್ಲಿತ್ತು. ತನ್ನ ಸಿಬ್ಬಂದಿಯವರಿಗೆ ಸಂಬಳ ಮತ್ತು ಇತರ ಅಗತ್ಯದ ಸವಲತ್ತುಗಳನ್ನು ನೀಡಲು ಅಸಾಧ್ಯವಾದ ಪರಿಸ್ಥಿತಿಯಲ್ಲಿತ್ತು. ಬಳಿಕ ಗಣನೀಯ ಪ್ರಮಾಣದಲ್ಲಿ ಆದಾಯ ಹೆಚ್ಚುತ್ತಾ ಸಾಗಿದ್ದು, ಆರ್ಥಿಕ ಸಂಕಷ್ಟದಿಂದ ಹೊರಬೀಳುವ ಪ್ರಗತಿಯತ್ತ ಸಾಗಿದೆ. ನಂತರ ೨೦೦೭ರಿಂದ ಕಳೆದ ೧೦ ವರ್ಷಗಳಲ್ಲಿ ಸತತ ಲಾಭಗಳಿಸುತ್ತಿದ್ದು, ಕಳೆದ ಸಾಲಿನಲ್ಲಿ ಪೂರ್ತಿ ಸಂಚಿತ ನಷ್ಟ ಹೊಂದಾಣಿಕೆಯಾಗಿ ಲಾಭಗಳಿಸಿದೆ.
ಪ್ರಸ್ತುತ ನಿಗಮದಲ್ಲಿ ೧೮ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆಗಳು, ಮೀನು ಉಪಾಹಾರಗೃಗಳು ೨೫ ಆಧುಬಿಕ ಸುಸಜ್ವಿತ ಮೀನು ಮಾರುಕಟ್ಟೆಗಳು, ತರಬೇತಿ ವ್ಯವಸ್ಥೆ, ಪ್ರಸ್ತುತ ಇರುವ ಯಾಂತ್ರಿಕ ದೋಣಿಗಳಿಗೆ ಡೀಸಿಲ್ ವಿತರಣಾ ವ್ಯವಸ್ಥೆ, ಮಂಜುಗಡ್ಡೆ ಮಾರಾಟ, ಪರ್ಸೀನ್ ಬೋಟ್ ಮೀನು ಮಾರುಕಟ್ಟೆ ಸಾಮರ್ಥ್ಯವನ್ನು ವೃದ್ಧಿಗೊಳಿಸಲಾಗಿದೆ ಎಂದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಹೆಚ್.ಎಸ್ ವೀರಪ್ಪ ಗೌಡ, ವಿ.ಕೆ ಶೆಟ್ಟಿ, ಡೆಪ್ಯೂಟಿ ಸೆಕ್ರೆಟರಿ ರಾಜೇಶ್ವರಿ ಲಿಂಗಯ್ಯ, ಮುರಳೀಧರ್ ಪಿ.ಎಮ್ ಮುದ್ದಣ್ಣ, ದೀಪಕ್ ಕುಮಾರ್, ರಮೇಶ್ ಪೂಜಾರಿ, ರಾಮ ಎಮ್. ಮೊಗೇರಾ, ಅಬ್ದುಲ್ ಅಜೀಜ್, ಎಂ.ಬಿ ಶಿವಣ್ಣ, ವಿಲಿಯಮ್ಸ್ ಮಾರ್ಟೀಸ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.
ವರದಿ: ಶರತ್ ಮಂಗಳೂರು

Related posts

Leave a Reply