Header Ads
Breaking News

ಕರ್ನಾಟಕ ಮೆಡಿಕಲ್-ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆ : ಕಾಂಞಗಾಡಿನಿಂದ ತಲಪಾಡಿಗೆ 11 ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ

ಮಂಜೇಶ್ವರ: ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಇಂದಿನಿಂದ ಆರಂಭಗೊಂಡಿದ್ದು, ಪರೀಕ್ಷೆ ಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜು.30,31, ಆ.1ರಂದು ಕಾಂಞಗಾಡಿನಿಂದ ತಲಪ್ಪಾಡಿಗೆ 11 ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಏರ್ಪಡಿಸಲಾಗಿದೆ. ಮೊದಲ ದಿನವಾದ ಇಂದು ತಲಪಾಡಿ ತನಕ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಆಗಮಿಸಿದರು. ಬೆಳಗ್ಗೆ 5.30ರಿಂದ ಪ್ರತಿ ನಿಮಿಷಕ್ಕೊಂದು ಬಸ್‍ನಂತೆ 11 ಬಸ್‍ಗಳು ಈ ನಿಟ್ಟಿನಲ್ಲಿ ಸಂಚಾರ ನಡೆಸಲಿವೆ. ಇವುಗಳಲ್ಲಿ 6 ಬಸ್‍ಗಳು ಕಾಞಂಗಾಡ್-ಮಾವುಂಗಾಲ್-ಚೆರ್ಕಳ ರೂಟ್‍ನಲ್ಲಿ, 5 ಬಸ್‍ಗಳು ಕಾಞಂಗಾಡ್-ಚಂದ್ರಗಿರಿ ರೂಟ್‍ನಲ್ಲಿ ಸಂಚಾರ ನಡೆಸಲಿವೆ. ಈ ಸಂದರ್ಭ ಕಾಸರಗೋಡು ಜಿಲ್ಲಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸಲೀಲ್ ಮಾಸ್ಟರ್ , ರಫಿಕ್ ಮಾಸ್ಟರ್, ಸನ ಸಲೀಮ್, ಅಪರ ಜಿಲ್ಲಾಧಿಕಾರಿ ರೂಪ, ವಿಠಲ ಮಾಸ್ಟರ್ , ಪ್ರೇಮನಾಥ ಮಾಸ್ಟರ್ ಮೊದಲಾದವರು ಪರೀಕ್ಷಾರ್ಥಿಗಳಿಗೆ ತಲಪಾಡಿಯಲ್ಲಿ ಸಹಕಾರಿಯಾದರು.

Related posts

Leave a Reply

Your email address will not be published. Required fields are marked *