Header Ads
Header Ads
Breaking News

ಕರ್ನಾಟಕ ರತ್ನ ಡಾ.ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ

ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು ಚಿಕಿತ್ಸೆ ಫಲಕಾರಿಯಾಗದೆ ಇಂದು ಪೂರ್ವಾಹ್ನ 11.44 ಲಿಂಗೈಕ್ಯರಾಗಿದ್ದಾರೆ.

ಅಸಂಖ್ಯಾತ ಭಕ್ತರು, ಲಕ್ಷಾಂತರ ಶಿಷ್ಯವೃಂದವನ್ನು ಹೊಂದಿದ್ದ ಡಾ.ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ಭಾನುವಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ತಡರಾತ್ರಿ ಸಿದ್ದಗಂಗಾಶ್ರೀಗಳ ಬಿಪಿ ಮತ್ತು ಉಸಿರಾಟದಲ್ಲಿ ತೀವ್ರ ವ್ಯತ್ಯಯವಾಗಿತ್ತು. ಇಂದು ಪೂರ್ವಾಹ್ನ ಲಿಂಗೈಕ್ಯರಾಗಿದ್ದಾರೆ. ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಇದೀಗ ಅವರ ಅಗಲಿಕೆಯಿಂದ ಸಿದ್ಧಗಂಗಾ ಮಠ ಅನಾಥವಾದಂತಾಗಿದೆ. ಇಡೀ ಮಠದ ಆವರಣ ಸಹಿತ ಭಕ್ತರ ಮನದಲ್ಲಿ ದುಃಖ ಮಡುಗಟ್ಟಿದೆ. ಮತ್ತೆ ಹುಟ್ಟಿ ಬನ್ನಿ ಶ್ರೀಗಳೇ ಎನ್ನುವುದು ಇಡೀ ಭಕ್ತವರ್ಗದಿಂದ ಕೇಳಿಬರುತ್ತಿರುವ ಮಾತಾಗಿದೆ.
 ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಕಳೆದ 50 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಡೆದಾಡುವ ದೇವರು ಎಂದು ಪ್ರಖ್ಯಾತಿಯನ್ನು ಗಳಿಸಿದ್ದ ಕರ್ನಾಟಕ ರತ್ನ, ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರ ಶ್ರೀಗಳು ವೈದ್ಯರ ಹಲವು ವಿಧದ ಚಿಕಿತ್ಸೆಯ ನಡುವೆಯೂ ಫಲಕಾರಿಯಾಗದೆ ಇಂದು ಬೆಳಗ್ಗೆ 11.44ಕ್ಕೆ ದೈವಾಧೀನರಾಗಿದ್ದಾರೆ. ಶ್ರೀಗಳ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಹಿತ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಗಣ್ಯರು ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 ಬರೋಬ್ಬರಿ 111ವಸಂತಗಳನ್ನು ಕಂಡಿದ್ದ ಡಾ.ಶಿವಕುಮಾರ ಶ್ರೀಗಳು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತಸಾಗರವು ಪ್ರವಾಹೋಪಾದಿಯಲ್ಲಿ ಹರಿದುಬರುತ್ತಿದೆ. ನಾಳೆ ಮಧ್ಯಾಹ್ನ 3ಗಂಟೆವರೆಗೆ ಸ್ವಾಮೀಜಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ತದನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಸಿದ್ದಗಂಗಾಶ್ರೀ ಲಿಂಗಕೈರಾಗಿದ್ದ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಿದೆ. ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ನಡೆಯಲಿದೆ.

 ಅನ್ನ, ಅಕ್ಷರ, ಜ್ಞಾನ ಸೇರಿದಂತೆ ನಿತ್ಯ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾ ಶ್ರೀ ಅಪಾರ ಶಿಷ್ಯ ವೃಂದ, ಅಸಂಖ್ಯಾತ ಭಕ್ತರ ಬಳಗವನ್ನು ಹೊಂದಿದವರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದ ಮಾದರಿ ಸಂತ ಅವರಾಗಿದ್ದರು.

Related posts

Leave a Reply