Header Ads
Breaking News

ಕರ್ನಾಟಕ ರಾಜ್ಯ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ

ಧರ್ಮಸ್ಥಳ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸುವ 35 ನೇ ಕರ್ನಾಟಕ ರಾಜ್ಯ ಪತ್ರಕರ್ತರ ಸಮ್ಮೇಳನ ಇದೇ ಮೊದಲ ಬಾರಿಗೆ ಕರಾವಳಿ ಭಾಗವಾದ ಮಂಗಳೂರಿನಲ್ಲಿ ಆಯೋಜನೆಗೊಂಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಾನಿಧ್ಯದಲ್ಲಿ ನಡೆಯುವ ಈ ರಾಜ್ಯ ಸಮ್ಮೇಳನದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಮಾ. 1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದ ಬಳಿಕ ಅವರು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು.
ಸಮ್ಮೇಳನದ ಆಶಯ ನುಡಿಗಳನ್ನು ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ನಡೆಸಿಕೊಡಲಿದ್ದಾರೆ. ಜಿಲ್ಲಾ ಉಸ್ತುವಾರು ಸಚಿವರು, ಉಭಯ ಜಿಲ್ಲೆಯ ಶಾಸಕರುಗಳು, ಇನ್ನೂ ಅನೇಕ ಗಣ್ಯರುಗಳು ಭಾಗಿಯಾಗಲಿದ್ದಾರೆ ಎಂದರು.

ಕರಾವಳಿ ಭಾಗದ ಪ್ರವಾಸೋಧ್ಯಮ ಮತ್ತು ಅಭಿವೃದ್ಧಿ ಎನ್ನುವ ವಿಚಾರಗೋಷ್ಠಿ ವಿವೇಲ್ ರೈ ಅವರ ಅಧ್ಯಕ್ಷತೆ ಸಮುದ್ರ ಮಧ್ಯದಲ್ಲೇ ನಡೆಯಲಿದೆ. ಮಾ. 8 ರಂದು ಮಹಿಳಾ ದಿನಾಚರಣೆ ಕೂಡ ಇರೂದರಿಂದ ಆ ದಿನದಲ್ಲಿ ಮಹಿಳೆಯರಿಗೂ ಆಧ್ಯತೆ ನೀಡಿ ರಾಜ್ಯದ ಎಲ್ಲಾ ಪತ್ರಕರ್ತೆಯರನ್ನು ಆಹ್ವಾನಿಸಿ ಅವರಿಗೋಸ್ಕರ ಒಂದು ಗೋಷ್ಠಿ ನಡೆಯಲಿದೆ. ಭಾರತೀಯ ಪತ್ರಿಕೋದ್ಯಮದ ಬಗ್ಗೆ ಮಾತನಾಡಲು ದೆಹಲಿ, ಜಾರ್ಖಂಡ್, ಶ್ರೀಲಂಕಾ ಮೊದಲಾದ ದೇಶದ ನಾನಾ ಭಾಗಗಳಿಂದ ಹಿರಿಯ ಪತ್ರಕರ್ತರು ಭಾಗವಹಿಲಿದ್ದಾರೆ. ಕರಾವಳಿಯ ಪ್ರಖ್ಯಾತ ಪತ್ರಕರ್ತರೂ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭ ಬೆಳ್ತಂಗಡಿ ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ, ಜಿಲ್ಲೆಯ ಪದಾಧಿಕಾರಿಗಳಾದ ಆನಂದ ಶೆಟ್ಟಿ, ಭಾಸ್ಕರ ರೈ ಕಟ್ಟ, ಜಗನ್ನಾಥ ಶೆಟ್ಟಿ ಬಾಳ, ಹಾಸನ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರವಿ ನಾಕಲ್ಗೋಡು, ತಾ| ಪತ್ರಕರ್ತರ ಸಂಘದಿಂದ ಕಾರ್ಯದರ್ಶಿ ಮನೋಹರ ಬಳಂಜ, ಶ್ರೀನಿವಾಸ ತಂತ್ರಿ, ಆರ್. ಎನ್ ಪೂವಣಿ, ಧನಕೀರ್ತಿ ಆರಿಗ, ಸತೀಶ್ ಪೇರ್ಲೆ ಇವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಡಿ ಹರ್ಷೇಂದ್ರ ಕುಮಾರ್ ಅವರಿಗೆ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನೂ ಭೇಟಿ ಮಾಡಿ ಸಮ್ಮೇಳಣದ ಆಮಂತ್ರಣ ಪತ್ರಿಕೆ ನೀಡಲಾಯಿತು.

Related posts

Leave a Reply

Your email address will not be published. Required fields are marked *