Header Ads
Header Ads
Breaking News

ಕರ್ನಾಟಕ ರಾಜ್ಯ ಬಜೆಟ್ 2019 : ಮೂಡುಬಿದಿರೆಯಲ್ಲಿ ಕ್ರೈಸ್ತ ಸಮುದಾಯದಿಂದ ಸಂಭ್ರಮಾಚರಣೆ

ಮೂಡುಬಿದಿರೆ : ಕರ್ನಾಟಕ ರಾಜ್ಯ ಕ್ರೈಸ್ತ ಸಮುದಾಯ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ಮಂಡಳಿಗೆ ಬಜೆಟ್‌ನಲ್ಲಿ ರೂ. 200 ಕೋಟಿಗಳ ಅನುದಾನ ಒದಗಿಸಿರುವುದನ್ನು ಮೂಡುಬಿದಿರೆ ಕ್ರೈಸ್ತ ಸಮುದಾಯದವರು ಸ್ವಾಗತಿಸಿ, ಸಂಭ್ರಮ ಆಚರಿಸಿದರು. 

ಕೈಸ್ತ ಸಮುದಾಯವರ ಅನೇಕ ವರ್ಷಗಳ ಬೇಡಿಕೆಯಾದ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ, ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜ ಅವಿರತ ಶ್ರಮವಹಿಸಿದ್ದು, ಅವರ ಹೋರಾಟದಿಂದ ಕ್ರೈಸ್ತ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಕನಸು ಈ ಬಜೆಟ್‌ನಲ್ಲಿ ನನಸಾಗಿದೆ ಎಂದು ಕ್ರೈಸ್ತ ಸಮುದಾಯದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದರು. ಕ್ರೈಸ್ತ ಮುಖಂಡರಾದ ಆಲ್ವಿನ್ ಮೆನೇಜಸ್, ವಿಲ್ಫ್ರೇಡ್ ಮೆಂಡೋನ್ಸ್, ಪ್ರವೀಣ್ ಲೋಬೊ, ಅರುಣ್ ಪಿರೇರಾ, ಜೆರಾಲ್ಡ್ ಲೋಬೊ, ಮೆಲ್ವಿನ್ ಡಿ’ಕೋಸ್ತ, ರೋನಾಲ್ಡ್ ಸೆರಾವೊ, ರಾಜೇಶ್ ಡಿ’ಕೋಸ್ತ, ಲಾಜರಿಸ್ ಡಿ’ಕೋಸ್ತ, ಆಲ್ವಿನ್ ವಾಲ್ಟರ್ ಡಿ’ಸೋಜ, ಹೆರಿ ರೇಗೊ, ಪೌಲ್ ಡಿ’ಸೋಜ, ಹರ್ಮನ್ ಡಿ’ ಸಿಲ್ವ, ಅನೀಶ್ ಡಿ’ಸೋಜ, ಫ್ರಾನ್ಸಿಸ್ ಸಿದ್ಧಕಟ್ಟೆ, ರಿಚಾರ್ಡ್ ಸಂಪಿಗೆ ಉಪಸ್ಥಿತರಿದ್ದರು.

Related posts

Leave a Reply