Header Ads
Header Ads
Breaking News

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಪದಗ್ರಹಣ ಸಮಾರಂಭ

 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್‌ರವರು ಮಾತನಾಡಿ, ರೈತ ಸಂಘಟನೆಗಳು ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ರೈತರಿಗೆ ಸಮಾಜದಲ್ಲಿ ಅಗ್ರಸ್ಥಾನಮಾನ ಸಿಗಬೇಕು. ಆದರೆ ‘ಜಾಗತಿಕ ಪಾಲಿಸಿ’ ಹಂತದಲ್ಲಿ ರೈತರಿಗೆ ಪ್ರಾಮುಖ್ಯತೆ, ಸವಲತ್ತು ಸಿಗುತ್ತಿಲ್ಲ.

ರೈತರ ಉತ್ಪಾದನೆ, ಅದರ ಹಕ್ಕು ರೈತರಿಗೆನೇ ಸಿಗುವಂತೆ ಮಾಡಬೇಕು. ಈ ಮೂಲಕ ರೈತರ ಗುರುತಿಸುವ ಕೆಲಸ ಮಾತ್ರವಲ್ಲ, ಅವರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತಹ ವ್ಯವಸ್ಥೆಯಾಗಬೇಕು ಎಂದರು.ಸಂಘದ ನಿರ್ಗಮನ ಅಧ್ಯಕ್ಷ ಸುರೇಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕುಜಂಬೆ, ಕಾರ್ಯಾಧ್ಯಕ್ಷ ರೂಪೇಶ್ ರೈ, ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಜಿಲ್ಲಾ ಸಂಘದ ಕೋಶಾಧಿಕಾರಿ ಇಬ್ರಾಹಿಂ ಖಲೀಲ್, ಜಿಲ್ಲಾ ಉಪಾಧ್ಯಕ್ಷ ಅಲ್ವಿನ್ ಮೆನೇಜಸ್ ಉಪಸ್ಥಿತರಿದ್ದರು.

Related posts

Leave a Reply