Breaking News

ಕರ್ನಾಟಕ ವಾಲಿಬಾಲ್ ಲೀಗ್, ಪೋಸ್ಟಲ್ ತಂಡಕ್ಕೆ ಪ್ರಶಸ್ತಿ

ಬೆಂಗಳೂರಿನ ತಂಡಗಳ ವ್ಯವಹಾರವಾಗಿದ್ದ ಫೈನಲ್ನಲ್ಲಿ ಪೋಸ್ಟಲ್ ತಂಡ ೩-೧ ಸೆಟ್ಗಳಿಂದ ಸಿಕ್ಯೂ‌ಎ‌ಎಲ್ ತಂಡವನ್ನು ಸೋಲಿಸಿ ಕರ್ನಾಟಕ ವಾಲಿ ಲೀಗ್ ಮೂರನೇ ಹಂತದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ಹೊಸನಗರದ ನೆಹರೂ ಕ್ರೀಡಾಂಗಣದಲ್ಲಿ ಮಧ್ಯರಾತ್ರಿ ಕೊನೆಗೊಂಡ ಫೈನಲ್ನಲ್ಲಿ ಪೋಸ್ಟಲ್ ತಂಡ ೨೫–೨೦, ೨೫–೨೧, ೨೦–೨೫, ೨೫–೧೩ರಲ್ಲಿ ೩-೧ ಸೆಟ್ಗಳ ಅಂತರದಿಂದ ಜಯಶಾಲಿಯಾಯಿತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದ್ದ ಮೊದಲ ಹಂತದ ಲೀಗ್ನಲ್ಲೂ ಪೋಸ್ಟಲ್ ತಂಡ ಜಯಶಾಲಿಯಾಗಿತ್ತು.
ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ತಂಡ ೨೫–೧೪, ೧೪–೨೫, ೨೮–೨೬, ೨೫–೨೩ರಲ್ಲಿ ೩-೧ ಸೆಟ್ಗಳ ಅಂತರದಿಂದ ಬಿ‌ಎಸ್ಎನ್‌ಎಲ್ ತಂಡವನ್ನು ಸೋಲಿಸುವ ಮೂಲಕ ಮೂರನೇ ಸ್ಥಾನ ಪಡೆಯಿತು. ನಾಲ್ಕನೇ ಹಂತದ ಲೀಗ್ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಜೂನ್ ೭ ರಿಂದ ೧೧ರವರೆಗೆ ನಡೆಯಲಿದೆ.

Related posts

Leave a Reply