Header Ads
Header Ads
Breaking News

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್‌ ಮಹಾಸಭೆ : ಟೈಲರ್‍ಸ್‌ಗಳ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ

ಟೈಲರ್ ವೃತ್ತಿ ನಿರತರು ಬೆನ್ನುನೋವು, ದೃಷ್ಠಿದೋಷ ಹಾಗೂ ಹಲವಾರು ಸಂಕಷ್ಟಗಳಿಂದ ಬಳಲುತ್ತಿದ್ದು, ಎಲ್ಲಾ ವೃತ್ತಿ ನಿರತರರಿಗೂ ಎನ್.ಪಿ.ಎಸ್ ಹಾಗೂ ಜನಶ್ರೀ ವಿಮಾ ಯೋಜನೆ, ಸ್ಮಾರ್ಟ್ ಕಾರ್ಡ್ ಬಿಡುಗಡೆ ಮಾಡಬೇಕೆಂದು ಕರ್ನಾಟಕ ಸ್ಟೇಟ್ ಟೈಲರ್ ಎಸೋಶಿಯೇಶ್ ವತಿಯಿಂದ ಸರಕಾರಕ್ಕೆ ಒತ್ತಾಯಿಸುತ್ತಿದ್ದು, ಇಂದಿನವರೆಗೂ ಈ ಯೋಜನೆ ಅನುಷ್ಟಾನಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿದೆ. ಈ ಸಂಬಂಧ ಡಿಸೆಂಬರ್ 23 ರಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್‌ ಪುತ್ತೂರು ಘಟಕ ಮಹಾಸಭೆ ನಡೆಯಲಿದ್ದು, ಸಭೆಯಲ್ಲಿ ಈ ವಿಚಾರವಾಗಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಯಲಿದೆ ಎಂದು ಪುತ್ತೂರು ಘಟಕದ ಸಂಘಟನೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

Related posts

Leave a Reply