Header Ads
Header Ads
Header Ads
Breaking News

ಕಲಾತ್ಮಕ ಕನ್ನಡ ಸಿನೆಮಾ ಆಯ್ರಾಕ್ಕೆ ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೂಹೂರ್ತ

ವಿವಿಧ ಕಲಾತ್ಮಕ, ವಿಶೇಷ ವಿಭಿನ್ನ ರೀತಿಯ ಸಿನಿಮಾ ನೀಡಿರುವ ಸ್ಯಾಂಡಲ್‌ವುಡ್ ಇದೀಗ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದೆ. ಅಂತೆಯೇ ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಯ್ರಾ ಕಲಾತ್ಮಕ ಕನ್ನಡ ಸಿನಿಮಾದ ಶೂಟಿಂಗ್‌ಗೆ ಚಾಲನೆ ನೀಡಲಾಯಿತು.

ಉದ್ಯಮಿ ದಿನೇಶ್ ಪ್ರಭು ಅವರು, ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿನೂತನ ಶೈಲಿಯ ಕಲಾತ್ಮಕ ಕನ್ನಡ ಸಿನೆಮಾ ಆಯ್ರಾಕ್ಕೆ ಚಾಲನೆ ಕೊಟ್ಟರು. ಸಿನೆಮಾ ನಿರ್ದೇಶಕ ಸಚಿನ್ ಬಾಡಾ ಮಾತನಾಡಿ, ನಾವು ಉತ್ಸಾಹಿ ತರುಣರು ಸೇರಿ ಕನ್ನಡ ಚಿತ್ರರಂಗಕ್ಕೆ ಏನಾದರೂ ಕಾಣಿಕೆ ಕೊಡಬೇಕು ಎಂದು ಆಲೋಚನೆಯಲ್ಲಿದ್ದಾಗ ಉಡುಪಿ ಜಿಲ್ಲೆಯ ಪಲಿಮಾರಿನ ಚಿತ್ರಾಲಯ ಆರ್ಟ್ ಗ್ಯಾಲರಿ ನಮಗೆ ಪ್ರೇರಣೆ ಕೊಟ್ಟಿತು. ಜಿಲ್ಲಾ ರಾಜ್ಯ ಪ್ರಶಸ್ತಿ ವಿಜೇತ ವೆಂಕಿ ಪಲಿಮಾರು ಇವರ ಕೈ ಚಲಕದಿಂದ ಮೂಡಿ ಬಂದ ಕಲಾಕೃತಿಗಳು ನಮಗೆ ಇದೇ ಆಧಾರದಲ್ಲಿ ಚಲನಚಿತ್ರ ನಿರ್ಮಿಸಲು ಪ್ರೇರಣೆ ಕೊಟ್ಟಿತು ಎಂದರು.

ಈ ಸಂದರ್ಭ ವೇದಮೂರ್ತಿ ಶ್ರೀನಿವಾಸ ಉಡುಪ ಪೂಜಾ ವಿಧಿ ನೆರವೇರಿಸಿದರು. ಸಮಾರಂಭದಲ್ಲಿ ಆಯುಷ್ ಅಧ್ಯಕ್ಷ ಡಾ.ಎನ್.ಟಿ ಅಂಚನ್, ಪಂಚಾಯತ್ ಸದಸ್ಯೆ ಗಾಯತ್ರಿ ಪ್ರಭು, ಕಲಾವಿದ ವೆಂಕಿ ಪಲಿಮಾರ್, ಪತ್ರಕರ್ತ ರಾಮಚಂದ್ರ ರಾವ್, ಕರುಣಾಕರ್ ನಾಯಕ್, ಬಾಲಕೃಷ್ಣ ಪೂಜಾರಿ, ಸುರೇಶ್ ಎರ್ಮಾಳ್ ಮತ್ತು ಚಿತ್ರೀಕರಣ ತಂಡ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *