Header Ads
Header Ads
Breaking News

ಕಲಾವಿದ ಸದಾಶಿವ ಸಾಲ್ಯಾನ್ ಇನ್ನಿಲ್ಲ. ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ್ದ ಸದಾಶಿವ.

ಮುಂಬಾಯಿ ಹವ್ಯಾಸಿ ನಾಟಕ ರಂಗದಲ್ಲಿ ಹುಟ್ಟಿ ಬೆಳೆದು ಬಹು ಜನಮನ್ನಣೆಗೆ ಪಾತ್ರರಾಗಿ ಮುಂದೆ ಕನ್ನಡ,ತುಳು ಚಿತ್ರರಂಗದಲ್ಲಿ ಮಿಂಚಿದ ಮುಂಬಯಿ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದ ಕಲಾವಿದ ಸದಾಶಿವ ಸಾಲ್ಯಾನ್ ಅವರು ನಿಧನರಾಗಿದ್ದಾರೆ.ಮುಂಬಯಿಯ ಮೀರಾ ರೋಡ್ ತನ್ನ ನಿವಾಸದಲ್ಲಿ ಕೋನೆ ಉಸಿರೆಳೆದಿದ್ದಾರೆ. ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬಾಯಿ ರಂಗ ಕಲಾವಿದನೆಂಬ ಹೆಗ್ಗಳಿಗೆ ಪಾತ್ರರಾಗಿದ್ದ ಇವರು ಮನೋಜ್ಞ ಅಭಿನಯವನ್ನು ನಾವಿಂದು ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯ ಓಲುಂಡು, ದಾರೆದ ಸೀರೆ, ಸಮರ ಸಿಂಹ, ಇವಳಂತ ಹೆಂಡ್ತಿ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೇಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ ಮೊದಲಾದ ಚಿತ್ರಗಳ ಮೂಲಕ ಸ್ಮರಿಸಿ ಕೊಳ್ಳಬಹುದು. ಅಂತಹ ಧೀಮಂತ ಕಲಾವಿದನನ್ನ ಮುಂಬಯಿರಂಗವಿಂದು ಕಳೆದು ಕೊಂಡಿದೆ.

Related posts

Leave a Reply