Header Ads
Breaking News

ಕಲಾಸಂಗಮ ಕಲಾವಿದರಿಂದ ‘ಶಿವಧೂತೆ ಗುಳಿಗೆ’ : ತುಳುವಿನ ವಿಭಿನ್ನ ಶೈಲಿಯ ನಾಟಕ ಪ್ರದರ್ಶನ

‘ಕಲಾಸಂಗಮ’ ನಾಟಕ ತಂಡದಿಂದ ವಿನೂತನ ಪ್ರಯೋಗವೊಂದು ನಡೆದಿದೆ. ಇದೇ ಮೊದಲ ಬಾರಿಗೆ ಪ್ರಥಮ ಪೌರಾನಿಕ ನಾಟಕವೆಂಬ ಹೆಗ್ಗಳಿಕಗೆ ಪಾತ್ರವಾದ ‘ಶಿವಧೂತೆ ಗುಳಿಗೆ’ ಎಂಬ ಅದ್ಧೂರಿ ತುಳು ವಿಭಿನ್ನ ಶೈಲಿಯ ನಾಟಕ ಪ್ರದರ್ಶನಗೊಂಡಿತು. 

ಮಂಗಳೂರಿನ ಪುರಭವನದಲ್ಲಿ ಪ್ರಥಮ ಬಾರಿಗೆ ಪೌರಾಣಿಕ ನಾಟಕವೊಂದು ಪ್ರದರ್ಶನಗೊಂಡಿದೆ. ಈ ಮೊದಲೇ 27 ಪ್ರದರ್ಶನಗಳನ್ನು ತುಳುನಾಡಿನಾದ್ಯಂತ ಪ್ರದರ್ಶಿಸಲು ತಯಾರಾದ ಪ್ರಥಮ ಪೌರಾಣಿಕ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಧರ್ಮರಕ್ಷಣೆಗಾಗಿ ತುಳುನಾಡಿನಲ್ಲಿ ನೆಲೆನಿಂತ ಗುಳಿಗ ಸ್ವಾಮಿಯ ಮಹಿಮೆಯ ಬಗ್ಗೆ ಎರಡೂವರೆ ಗಂಟೆಯ ಪರಿಕಲ್ಪನೆ ಇದೆ. ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಈ ನಾಟಕದಲ್ಲಿ ಹಲವಾರು ವಿಶೇಷತೆಯನ್ನು ಹೊಂದಿರುವ ನಾಟಕವಾಗಿದೆ.

ಶಿವಧೂತೆ ಗುಳಿಗೆ ಎಂಬ ಅದ್ಧೂರಿ ತುಳು ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ವಿವೇಕ್ ರೈ ಅವರು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಗುಳಿಗನ ಕಾರಣಿಕ ಊರೀಡಿ ಹರಡಲಿ. ಈ ನಾಟಕ ಯಶಸ್ವಿಗೊಳ್ಳಲಿ ಎಂದು ಹೇಳಿದರು.

ಆನಂತರ ತುಳು ಚಿತ್ರರಂಗದ ನಿರ್ದೇಶಕ, ನಟ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಯಾವುದೇ ನಾಟಕ ಮಾಡಿದ್ದರೂ ಅದರಲ್ಲಿ ಒಂದು ವಿಭಿನ್ನತೆ ಇದೆ. ಈ ನಾಟಕ ಯಶಸ್ವಿಯಾಗಿ ಮೂಡಿಬರಲಿ ಎಂದು ಹೇಳಿದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಶಿವಧೂತೆ ಗುಳಿಗ ನಾಟಕದ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್, ಸಂಗೀತ ನಿರ್ದೇಶಕ ಎ.ಕೆ. ವಿಜಯ ಕೋಕಿಲಾ, ಹಿರಿಯ ರಂಗಕರ್ಮಿ ವಿ.ಜಿ. ಪಾಲ್, ನಾಗರಾಜ್ ಶೆಟ್ಟಿ ಮತ್ತು ಹಿರಿಯ ರಂಗಕಲಾವಿದರು ಉಪಸ್ಥಿತರಿದ್ದರು.

ಈ ನಾಟಕದಲ್ಲಿ ಹರೀಶ್ ಅಚಾರ್ಯ ಮತ್ತು ಚಂದ್ರಶೇಖರ್ ಶಿರ್ವ ಮಟ್ಟಾರ್ ಅವರ ರಂಗವಿನ್ಯಾಸದ ಕೈಚಳಕವಿದೆ. ಎ.ಕೆ. ವಿಜಯ ಕೋಕಿಲಾ ಇವರ ಅದ್ಭುತ ಸಂಗೀತ ನಿರ್ದೇಶನದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ರವೀಂದ್ರ ಪ್ರಭು, ಡಾ. ವೈಷ್ಣವಿ ನರಸಿಂಹ ಕಿಣಿ, ವಿಶಾಲ್ ರಾಜ್ ಕೋಕಿಲ ಇವರ ಹಿನ್ನಲೆ ಗಾಯನವಿದೆ. ರಾಧಾ-ಕಲ್ಯಾಣ ಧಾರವಾಹಿ ಖ್ಯಾತಿಯ ಸ್ವರಾಜ್ ಶೆಟ್ಟಿ ಗುಳಿಗನ ಪಾತ್ರವನ್ನು ನಿರ್ವಹಿಸಿದ್ದಾರೆ. ಒಟ್ಟಾರೆಯಾಗಿ ಒಂದು ಅದ್ಭುತ ಪರಿಕಲ್ಪನೆಯ ನಾಟಕ ಇದಾಗಿದ್ದು, ಯಶಸ್ವಿಯಾಗಿ ಶಿವಧೂತೆ ಗುಳಿಗೆ ನಾಟಕ ಮೂಡಿಬರಲಿ ಎಂಬುವುದೇ ನಮ್ಮ ಆಶಯ.

Related posts

Leave a Reply

Your email address will not be published. Required fields are marked *