Breaking News

ಕಲಿಕೆಗೆ ಅನುಕೂಲದ ಹೊಸ ಕಿರು ತಂತ್ರಾಂಶ, ಬೆಂಗಳೂರಿನಲ್ಲಿ ಬೈಜೂಸ್‌ನಿಂದ ಬಿಡುಗಡೆ

ದೇಶದ ದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜೂಸ್, ಮತ್ತೊಂದು ಹೊಸ ಶೈಕ್ಷಣಿಕ ಕಿರುತಂತ್ರಾಂಶ ಆ್ಯಪ್ ಬಿಡುಗಡೆ ಮಾಡಿದೆ.
ಈ ಹಿಂದೆ ೧ರಿಂದ ೧೨ನೇ?ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ‘ಕೆ-೧೨’ ಶೈಕ್ಷಣಿಕ ಆ್ಯಪ್ ರೂಪಿಸಿದ್ದ ಬೈಜೂಸ್, ಈ ಹೊಸ ಆ್ಯಪ್ನಲ್ಲಿ ಕೆಲವು ಹೊಸತನ ಅಳವಡಿಸಿಕೊಂಡಿದೆ. ವಿದ್ಯಾರ್ಥಿಗಳ ಆ್ಯಪ್ ಜತೆ ಪೋಷಕರಿಗಾಗಿಯೂ ಪೇರೆಂಟ್ ಕನೆಕ್ಟ್ ಆ್ಯಪ್ ರೂಪಿಸಿದ್ದು, ಇದು ಮಕ್ಕಳ ಪ್ರಗತಿಯ ಬಗ್ಗೆ ಪೋಷಕರಿಗೆ ಸಂಪೂರ್ಣ ಚಿತ್ರಣ ನೀಡುತ್ತದೆ ಎಂದು ಆ್ಯಪ್ ಬಿಡುಗಡೆ ಮಾಡಿದರು.
೮೦ ಲಕ್ಷದಷ್ಟು ಸಂಖ್ಯೆಯಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲಾಗಿದ್ದು ನಾಲ್ಕು ಲಕ್ಷ ವಾರ್ಷಿಕ ಚಂದಾದಾರರನ್ನು ಹೊಂದಿದೆ. ೧,೭೦೦ಕ್ಕೂ ಹೆಚ್ಚಿನ ನಗರ ಮತ್ತು ಪಟ್ಟಣಗಳ ವಿದ್ಯಾರ್ಥಿಗಳು ಪ್ರತಿದಿನ ೪೦ ನಿಮಿಷ ಬೈಜೂಸ್ ವೀಕ್ಷಿಸುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶದಿಂದ ಸ್ಥಳೀಯ ಭಾಷೆಗಳಲ್ಲೂ ಆ್ಯಪ್ ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆಯ ತಾಂತ್ರಿಕ ತಂಡ ಕಾರ್ಯನಿರತವಾಗಿದೆ. ಈಗಾಗಲೇ ಹಿಂದಿಯಲ್ಲಿ ಆ್ಯಪ್ ಸಿದ್ಧವಾಗಿದೆ.

Related posts

Leave a Reply