Breaking News

ಕಲ್ಮಿಂಜ ಸಂಪರ್ಕಿಸುವ ನೂತನ ರಸ್ತೆ,  ಸಚಿವ ಯು. ಟಿ. ಖಾದರ್ ಉದ್ಘಾಟನೆ


ಜಿಲ್ಲಾ ಪಂಚಾಯತ್ ಅನುದಾನದಲ್ಲಿ ವಿದ್ಯಾನಗರದಿಂದ ಅಂಬುಗ, ಮಟ್ಟೆಮಾರ್, ಕಂಬಳ, ದೋಸೆಮನೆಯಿಂದ ಕಲ್ಮಿಂಜ ಸಂಪರ್ಕಿಸುವ ನೂತನ ರಸ್ತೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾನಗರ, ಗ್ರಾಮೀಣ ಪ್ರದೇಶದ ಒಳಪ್ರದೇಶಗಳ ಸಂಪರ್ಕದಿಂದ ಅಭಿವೃದ್ಧಿಗೆ ಪೂರಕವಾಗಿದ್ದು, ನೂತನವಾಗಿ ನಿರ್ಮಾಣಗೊಂಡಿರುವ ವಿದ್ಯಾನಗರ ಕಲ್ಮಿಂಜ ರಸ್ತೆ ಇಲ್ಲಿನ ಜನರೊಂದಿಗೆ ಕೃಷಿಕರಿಗೂ ಸಹಕಾರಿಯಾಗಲಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಡಾಮರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಅಭಿಪ್ರಾಯಪಟ್ಟರು. ಇನ್ನು ಕುರ್ನಾಡು ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿಯವರ ಶ್ರಮದಿಂದ ಈ ರಸ್ತೆ ನಿರ್ಮಾಣವಾಗಿದೆ. ಜನಪ್ರತಿನಿಽಗಳು ಉತ್ತಮ ಕಾರ್ಯ ನಿರ್ವಹಿಸಿದಾಗ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಸಾಧ್ಯ ಎಂದರು.
ಈ ವೇಳೆ ಕುರ್ನಾಡು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ. ಆರ್. ರವಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply