Breaking News

ಕಲ್ಯಾಣಪುರ ಸೇತುವೆಯಲ್ಲಿ ಟೆಂಪೋ ಪಲ್ಟಿ, ಪ್ರಯಾಣಿಕರು ಪಾರು, ಟ್ರಾಫಿಕ್ ತತ್ತರ

ಉಡುಪಿಯ ಸಂತಕಟ್ಟೆ ನಯಂಪಳ್ಳಿ ಸೇತುವೆಯಲ್ಲಿ ಟೆಂಪೊವೊಂದು ಪಲ್ಟಿ ಅದ ಘಟನೆ ಬುಧವಾರ್ ಬೆಳಿಗ್ಗೆ ನಡೆದಿದೆ.
ಪೂತ್ತೂರಿನಿಂದ ಸುಮಾರು ೧೪ ಮಂದಿ ಪ್ರಯಾಣಿಕರಿದ್ದ ಟೆಂಪೊ ಟ್ರಾವೆಲರ್ ನಯಂಪಳ್ಳಿ ಸೇತುವೆ ಸಮೀಪಿಸುತ್ತಿದ್ದಂತೆ ಉರುಳಿ ಬಿದ್ದಿದೆ. ಅದೃಷ್ಟವಶತ್ ಟೆಂಪೊ ಒಳಗಡೆ ಇದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬೆಳಗ್ಗಿನಿಂದ ಮಳೆ ಜೋರಾಗಿ ಸುರಿಯುತ್ತಿದ್ದು ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಸೇತುವೆ ಮಧ್ಯೆದಲ್ಲಿಯೆ ವಾಹನ ಪಲ್ಟಿಯಾದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಟೆಂಪೊವನ್ನು ಎತ್ತಿ ಬದಿಗಿರಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Related posts

Leave a Reply