Header Ads
Header Ads
Header Ads
Breaking News

ಕಲ್ಲಂದಡ್ಕದಲ್ಲಿ ನಡೆದ ಶೂಟೌಟ್ ಪ್ರಕರಣ:ಓರ್ವ ಆರೋಪಿಯ ಬಂಧನ

ಪುತ್ತೂರು: ಕೊಡಿಪಾಡಿ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ನ.26ರಂದು ಮುಸ್ಸಂಜೆ ವೇಳೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ನೀಡಿದ ದೂರಿನಂತೆ ಪುತ್ತೂರು ನಗರ ಠಾಣಾ  ಪೊಲೀಸರು  ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ನ.28 ರಂದು ಓರ್ವ ಆರೋಪಿ ಕೇಪು ಗ್ರಾಮದ ಕುಕ್ಕಿಗಟ್ಟು ನೀರ್ಕಾಜೆ ನಿವಾಸಿ ಹಸನ್ ಎಂಬವರ ಪುತ್ರ ಅನೀಫ್ ಜೋಗಿ (39 ವ)ರವರನ್ನು ನ.28 ರಂದು ಗುಂಡ್ಯದ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.

ಪಶ್ಚಿಮ ವಲಯ ಐಜಿಪಿ ಯವರ ಮಾಹಿತಿ ಮೇರೆಗೆ ದ.ಕ ಜಿಲ್ಲಾ ಎಸ್ ಪಿ ಮತ್ತು ಡಿ ವೈಎಸ್ ಪಿ ಮಾರ್ಗದರ್ಶನದಲ್ಲಿ ಪುತ್ತೂರು, ಉಪ್ಪಿನಂಗಡಿ ಡಿಸಿಐಬಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *