Header Ads
Header Ads
Breaking News

ಕಲ್ಲಟ್ಟೆ ಕಾಮಿನಿ ಹೊಳೆಗೆ ಮಣ್ಣು ಸರಿದು ಪೈಪ್ ಅಳವಡಿಕೆ : ಅವೈಜ್ಞಾನಿಕ ಕಾಮಗಾರಿಗೆ ಕೃಷಿಕರ ವಿರೋಧ.

ಕಲ್ಲಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯೊಂದಕ್ಕೆ ಸಂಪರ್ಕ ಕಲ್ಪಿಸಲು ಕೃಷಿಕರ ಜೀವನಾಡಿ ಕಾಮಿನಿ ಹೊಳೆಯನ್ನು ಮುಚ್ಚಿ ನೀರು ಹರಿದು ಹೋಗಲು ಪೈಪ್ ಅಳವಡಿಸಿ ಅವೈಜ್ಞಾನಿಕ ಕಾಮಗಾರಿ ನಡೆಸುವ ಹುನ್ನಾರ ನಡೆಸಿದ್ದಾರೆ. ಮಳೆಗಾಲದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದು ಆ ಕಾರಣದಿಂದ ಈ ಅವೈಜ್ಞಾನಿಕ ಕಾಮಗಾರಿಯನ್ನು ಕೈಬಿಟ್ಟು ಸೇತುವೆ ನಿರ್ಮಿಸುವಂತೆ ಕೃಷಿಕರ ಪರವಾಗಿ ಸ್ಥಳೀಯರಾದ ಶಂಕರ್ ಪೂಜಾರಿ ಒತ್ತಾಯಿಸಿದ್ದಾರೆ.

ಕಲ್ಲಟ್ಟೆ ಜಾರಂದಾಯ ದೈವಸ್ಥಾನದ ಬಳಿಯ ಕಿಂಡಿ ಅಣೆಕಟ್ಟು ಬಳಿ ಪಡುಬಿದ್ರಿ ಪೇಟೆಯಿಂದ ಮೀನುಗಾರಿಕ ರಸ್ತೆಗೆ ನೇರ ಸಂಪರ್ಕಕ್ಕಾಗಿ ರಸ್ತೆ ನಿರ್ಮಾಣವಾಗುತ್ತಿದ್ದು, ಆರಂಭದಲ್ಲಿ ಇಲ್ಲಿ ಸೇತುವೆ ನಿರ್ಮಿಸುವ ಭರವಸೆ ಕೂಡ ವ್ಯಕ್ತವಾಗಿತ್ತು, ಇದೀಗ ಸ್ಥಳೀಯರಲ್ಲಿ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸೇವೆಯ ಬದಲು ಹೊಳೆಗೆ ಮಣ್ಣು ಸುರಿದು ಅದರಡಿಯಲ್ಲಿ ನೀರು ಹರಿದು ಹೋಗಲು ಪೈಪ್ ಅಳವಡಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಕಾಮಗಾರಿ ಏನಾದರೂ ನಡೆಯಿತಾದರೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಪಾದೆಬೆಟ್ಟು, ಎರ್ಮಾಳು ಸಹಿತ ಈ ಭಾಗದ ಸುತ್ತಲ ಕೃಷಿ ಪ್ರದೇಶಗಳಲ್ಲದೆ ಮನೆಗಳಿಗೂ ಹಾನಿ ಸಂಭವಿಸುವ ಸಾಧ್ಯತೆ ಇದೆ. ಇದೇ ಮಾದರಿಯಲ್ಲಿ ಜನರ ಮಾತನ್ನು ಕಡೆಗಣಿಸಿ ಹೆಜಮಾಡಿ ಅಳೆವೆ ಬಳಿ ಅವೈಜ್ಞಾನಿಕ ಸೇತುವೆ ನಿರ್ಮಿಸಿ ಮಳೆನೀರು ಸಮುದ್ರ ಸೇರಲು ವಿಫಲವಾದ ಕಾರಣ ಮಳೆಗಾಲದಲ್ಲಿ ಎಲ್ಲೆಡೆ ಕೃತಕ ನೆರೆ ಸೃಷ್ಠಿಯಾಗಿ ಶಾಲಾ ಪುಟ್ಟ ಬಾಲಕಿಯೋರ್ವಳು ನೆರೆಗೆ ಕೊಚ್ಚಿ ಹೋದ ಘಟನೆಯ ನೋವು ಇನ್ನೂ ಜನರ ಮನದಿಂದ ಮಾಸಿಲ್ಲ. ಇದೀಗ ಮತ್ತೆ ಅದಕ್ಕಿಂತಲೂ ಅಪಾಯಕಾರಿಯಾಗಿ ಹೊಳೆಯ ನೀರನ್ನು ತಡೆಯುವ ಪ್ರಯತ್ನ ನಡೆಯುತ್ತಿದ್ದು, ಯಾವುದೇ ಕಾರಣಕ್ಕೆ ಕೃಷಿಕರ ಸಹಿತ ಉತ್ತರ ಭಾಗದ ಜನರ ಪ್ರಾಣಕ್ಕೆ ಮಾರಕ ವಾಗಬಲ್ಲ ಈ ಕಾಮಗಾರಿಯನ್ನು ಕಾರ್ಯಕತವಾಗಲು ಕೃಷಿಕರಾದ ನಾವು ಒಪ್ಪುದಿಲ್ಲ, ರಸ್ತೆ ಅಗತ್ಯವಾಗಿ ಬೇಕಾಗಿದೆ ಆ ರಸ್ತೆಗೆ ಸಂಪರ್ಕವನ್ನು ವ್ಶೆಜ್ಞಾನಿಕವಾಗಿ ಸೇತುವೆ ನಿರ್ಮಿಸುವ ಮೂಲಕ ಮಾಡಲಿ, ಅದು ಬಿಟ್ಟು ಅವ್ಶೆಜ್ಞಾನಿಕ ಕಾಮಗಾರಿಗೆ ನಾವು ಯಾವುದೇ ಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಸಮಸ್ತ ಕೃಷಿಕರ ಪರವಾಗಿ ಶಂಕರ್ ಪೂಜಾರಿ ಎಚ್ಚರಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಸಹಿತ ಜಿಲ್ಲಾಧಿಕಾರಿಗಳು ಸಹಿತ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ ಇಲ್ಲಿನ ಸಾಧಕ ಭಾದಕಗಳ ಬಗ್ಗೆ ತಿಳಿದು ಕಾಮಗಾರಿ ಮುಂದುವರಿಸುವ ಯಾ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳ ಬೇಕಾಗಿದೆ ಎಂದರು.

Related posts

Leave a Reply