Header Ads
Header Ads
Breaking News

ಕಲ್ಲಡ್ಕದಲ್ಲಿ ರಕ್ತದಾನ ಶಿಬಿರ: ಒಟ್ಟು 52 ಯುನಿಟ್ ರಕ್ತ ಸಂಗ್ರಹ.

ಬಂಟ್ವಾಳ:ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಟಿಪ್ಪು ಸುಲ್ತಾನ್ ಯಂಗ್’ಮೆನ್ಸ್ ಕಲ್ಲಡ್ಕ ಇದರ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಲಯನ್ಸ್ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಬಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇದರ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಹನೀಫ್ ಖಾನ್ ಕೊಡಾಜೆ ಅವರು ಶಿಬಿರವನ್ನು ಉದ್ಘಾಟಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳದ ಸದಸ್ಯರಾದ ಅಬೂಬಕರ್ ಸಿದ್ದೀಕ್ ಪನಾಮ ಸದಸ್ಯರು ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ೫೦ನೇ ಬಾರಿ ಸ್ವಯಂ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದ ಜನಾಬ್ ಅಬ್ದುಲ್ ಹಕೀಂ ಕಲ್ಲಡ್ಕರವರನ್ನು ಸನ್ಮಾನಿಸಲಾಯಿತು.
ಈ ರಕ್ತದಾನ ಶಿಬಿರದಲ್ಲಿ ಒಟ್ಟು 52 ಯುನಿಟ್ ರಕ್ತವನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜನಾಬ್ ಲುಕ್ಮಾನ್, ಕೆ.ಪದ್ಮನಾಭ ರೈ, ಝಕರಿಯಾ ಗೊಳ್ತಮಜಲು,ರಾಜ ಮೋನಾಕ, ಹಮೀದ್ ಅಲಿ ಗೊಳ್ತಮಜಲು,ಉಮರ್ ಫಾರೂಕ್,ಅಬ್ದುಲ್ ಹಕೀಂ ಕಲ್ಲಡ್ಕ, ಸಫ್ವಾನ್ ಸಾಬಿತ್ ಅಜ್ಜಿಕಲ್,ಯೂಸುಫ್ ಹೈದರ್,ಅಬ್ದುಲ್ ಲತೀಫ್ ನೇರಳಕಟ್ಟೆ,ಮುಹದ್ ಜಿ.ಎಂ,ಸಲೀಂ ಮುರ,ಅಜಯ್,ಅಶ್ರಫ್ ಅರಬಿ ಕಲ್ಲಡ್ಕ, ಹಾಗು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

Related posts

Leave a Reply