Header Ads
Header Ads
Breaking News

ಕಲ್ಲಡ್ಕ ಬಳಿ ಬೈಕ್‌ಗೆ ಕ್ವಾಲೀಸ್ ಕಾರು ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ಕ್ವಾಲೀಸ್ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಕಲ್ಲಡ್ಕ ಬಳಿಯ ಕೆಸಿ ರೋಡ್‌ನಲ್ಲಿ ಬೆಳಿಗ್ಗೆ ಸಂಭವಿಸಿದೆ.
ಬಿ. ಸಿ. ರೋಡ್ ಕೈಕಂಬದ ಪರ್ಲ್ಯ ನೆಂದರಬೆಟ್ಟು ನಿವಾಸಿ ದಿ. ಇಸ್ಮಾಯಿಲ್ ಎಂಬವರ ಪುತ್ರ ಮುಹಮ್ಮದ್ ಓಯೀಸ್ ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಕಲ್ಲಡ್ಕದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದು, ವಾಪಾಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Related posts

Leave a Reply