Header Ads
Header Ads
Breaking News

ಕಲ್ಲಡ್ಕ: ಶ್ರೀ ಅಯ್ಯಪ್ಪ ಸ್ವಾಮಿಯ ಶಬರಿಮಲೆ ಕ್ಷೇತ್ರ ಉಳಿಸಿ ಹೋರಾಟ

ಬಂಟ್ವಾಳ: ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಮತ್ತು ಶ್ರೀರಾಮ ಮಂದಿರ ಕಲ್ಲಡ್ಕ ಹಾಗೂ ನಾನಾ ಹಿಂದು ಸಂಘಟನೆಗಳ ಆಶ್ರಯದಲ್ಲಿ ಕಲ್ಲಡ್ಕ ಶ್ರೀರಾಮ ಮಂದಿರದ ಮುಂಭಾಗ ಶ್ರೀ ಅಯ್ಯಪ್ಪ ಸ್ವಾಮಿಯ ಶಬರಿಮಲೆ ಕ್ಷೇತ್ರ ಉಳಿಸಿ ಹೋರಾಟದ ಅಂಗವಾಗಿ ಭಜನೆ, ಪ್ರತಿಭಟನಾ ಸಭೆ ನಡೆಯಿತು.ತೀರ್ಪನ್ನು ಯಥಾವತ್ತಾಗಿ ಪಾಲಿಸುವ ಕೇರಳ ಸರಕಾರದ ಧೋರಣೆ ಗಾಯದ ಮೇಲೆ ಬರೆ ಎಳೆದಂತೆ ವೇದನೆ ಉಂಟುಮಾಡಿದ್ದು, ಭಜನೆ ಮತ್ತು ಸತ್ಯಾಗ್ರಹದ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ.

ಮುಂದಿನ ದಿನಗಳಲ್ಲಿ ಮನವಿಗೆ ಸ್ಪಂದಿಸದೇ ಇದ್ದಲ್ಲಿ ತೀವ್ರ ಹೋರಾಟ ಮಾಡಬೇಕಾದೀತು ಎಂದುಪ್ರತಿಭಟನಾ ಸsಯಲ್ಲಿ ಹೋರಾಟಗಾರರು ಎಚ್ಚರಿಕೆ ನೀಡಿದರು. ಈ ಕುರಿತು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ತೀರ್ಮಾನಿಸಿತು.ಈ ಸಂದರ್ಭ ವೇದಿಕೆಯಲ್ಲಿ ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಸಂಜೀವ ಗುರುಸ್ವಾಮಿ, ಕಮಲ ಗುರುಸ್ವಾಮಿ, ಯೋಗೀಶ್, ಧರಣೀಶ್, ಉಮೇಶ್, ಮೋಹನದಾಸ್, ರತ್ನಾಕರ, ಹೊನ್ನಪ್ಪ ಗುರುಸ್ವಾಮಿಗಳು ಉಪಸ್ಥಿತರಿದ್ದರು.

Related posts

Leave a Reply