Header Ads
Header Ads
Breaking News

ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಲೇಖಕ ಎಸ್.ಎಲ್.ಬೈರಪ್ಪ ಭೇಟಿ

ಬಂಟ್ಚಾಳ: ಹಿಂದೂ ಧರ್ಮ ಹೆಣ್ಣಿಗೆ ದೇವರ, ತಾಯಿಯ ಸ್ಥಾನ ನೀಡಿರುವುದು ನಾವು ಹೆಮ್ಮೆ ಪಡುವ ವಿಚಾರ ಎಂದು ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತ, ಲೇಖಕ ಪದ್ಮಶ್ರೀ ಡಾ. ಎಸ್.ಎಲ್.ಭೈರಪ್ಪ ಹೇಳಿದ್ದಾರೆ. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಅವರು ಶಾಲೆಯ ಶೈಕ್ಷಣಿಕೆ ಚಟುವಟಿಕೆಯನ್ನು ವೀಕ್ಷೀಸಿದ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಚಟುವಟಿಕೆಯ ಬಗ್ಗೆ ಹಲವು ವರ್ಷದಿಂದ ಕೇಳಿ ತಿಳಿದುಕೊಂಡಿದ್ದೆ ಎಂದರು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಮಾತನಾಡಿ ಪ್ರಶಸ್ತಿಗೆ ಗೌರವ ತಂದು ಕೊಡುವ ಮೇರು ವ್ಯಕ್ತಿತ್ವ ಭೈರಪ್ಪ ನವರದ್ದು.

 88 ರ ವಯಸ್ಸಿನ ದೇಶ ಪ್ರೇಮಿ ತರುಣ ತನ್ನ ಚಿಂತನೆಗಳ ಮೂಲಕ ಜನರನ್ನು ತಿದ್ದಿ ತೀಡಿದವರು, ಕನ್ನಡವೇ ತನ್ನ ಉಸಿರು ಎಂದು ಜೀವನವನ್ನಾಗಿಸಿದವರಾಗಿದ್ದಾರೆ,ಇಂತಹ ಮೇರು ವ್ಯಕ್ತತ್ವದ ಸಾಧಕ ಬೈರಪ್ಪರವರು ನಮ್ಮ ವಿದ್ಯಾಕೇಂದ್ರಕ್ಕೆ ಬರಬೇಕೆಂಬ ಬಹುಕಾಲದ ಆಸೆ ಇಂದು ನೆರವೇರಿದೆ ಎಂದರು.ಶಾಲಾ ಸಂಚಾಲಕ ವಸಂತಮಾಧವ, ಸಹ ಸಂಚಾಲಕ ರಮೇಶ್, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವೇದಿಕೆಯಲ್ಲಿದ್ದರು. ಇದಕ್ಕೂ ಮುನ್ನ ಡಾ.ಎಸ್.ಎಲ್.ಭೈರಪ್ಪ ಅವರು ಶ್ರೀರಾಮ ವಿದ್ಯಾಕೇಂದ್ರದ ವಿವಿಧ ತರಗತಿ ಕುಟೀರಗಳಿಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಯನ್ನು ವೀಕ್ಷೀಸಿ ಶ್ಲಾಘನೆ ವ್ಯಕ್ತಪಡಿಸಿದರು. ಡಾ.ಪ್ರಭಾಕರ ಭಟ್ ಅವರು ಶಾಲೆಯ ಕುರಿತ ಮಾಹಿತಿ ನೀಡಿದರು.

Related posts

Leave a Reply