Header Ads
Breaking News

ಕಲ್ಲಬೆಟ್ಟುವಿನಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಆರಂಭ

ಮೂಡುಬಿದಿರೆ : ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ. ಶಿಸ್ತು ವ್ಯಕ್ತಿತ್ವ ವಿಕಸನದ ಒಂದು ಭಾಗವಾಗಿದ್ದು ಈ ಶಿಸ್ತನ್ನು ವಿದ್ಯಾರ್ಥಿಗಳು ಸದಾ ಪಾಲಿಸಬೇಕು. ವ್ಯಕ್ತಿತ್ವಕ್ಕೆ ಕೊಡಲಿಯೇಟಿನಂತಿರುವ ಮಾದಕ ವ್ಯಸನಗಳ ಮಾಫಿಯಾ ನಿಯಂತ್ರಿಸುವ ಬಗ್ಗೆ ಈ ಶಿಬಿರಗಳು ಬದಲಾವಣೆಗೆ ನಾಂದಿಯಾಗಲಿ. ಇತರರಿಗೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಸ್ವಚ್ಛತೆಯ ಜಾಗೃತಿ ಮೂಡಿಸುವಂತಾಗಲಿ ಎಂದು ಕರಿಂಜೆಯ ಓಂ ಶ್ರೀ ಶಕ್ತಿ ಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.ಅವರು ಕಲ್ಲಬೆಟ್ಟಿನ ಉನ್ನತೀಕರಿಸಿದ ಮಾ.ಹಿ.ಪ್ರಾ. ಶಾಲೆಯಲ್ಲಿ ಶನಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶ್ರೀ ಮಹಾವೀರ ಪ.ಪೂ ಕಾಲೇಜಿನ ಎನ್ನೆಸ್ಸೆಸ್ ವತಿಯಿಂದ ಜರಗುವ 7 ದಿನಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಸಮಾಜ ಸೇವೆಯ ಮಹತ್ವ ಅರಿತು ಸಮಾಜ ನಿರ್ಮಾಣ ಕಾರ್ಯದಲ್ಲಿ ಯುವಜನತೆ ಮುನ್ನಡೆಯಲು ಈ ಶಿಬಿರ ಸಹಕಾರಿಯಾಗಲಿ ಎಂದರು. ಈ ಸಂದರ್ಭ ವಾರ್ಡ್ ಸದಸ್ಯ ಜೊಸ್ಸಿ ಮಿನೇಜಸ್, ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಶ್ರೀಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *