Header Ads
Header Ads
Breaking News

ಕಲ್ಲಬೆಟ್ಟು-ಮರಿಯಾಡಿ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ : ಶಾಸಕ ಉಮಾನಾಥ ಕೋಟ್ಯಾನ್‌ರಿಂದ ಗುದ್ದಲಿ ಪೂಜೆ

ಮೂಡುಬಿದಿರೆ: ಜನರ ಬಹುದಿನದ ಬೇಡಿಕೆಯಾಗಿರುವ ಕಲ್ಲಬೆಟ್ಟು-ಸಾಗಿನಬೆಟ್ಟು ಮೂಲಕ ಮರಿಯಾಡಿಯನ್ನು ಸಂಪರ್ಕಿಸುವ 1.3 ಕಿ.ಮೀ ದೂರ ವಿಸ್ತೀರ್ಣದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಎಕ್ಸಲೆಂಟ್ ಕಾಲೇಜನ್ನು ಸಂಪರ್ಕಿಸುವ ರಸ್ತೆ ಬಳಿ ಶಾಸಕ ಉಮಾನಾಥ ಕೋಟ್ಯಾನ್ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ‘ರಸ್ತೆಯ ಅಭಿವೃದ್ಧಿಯಿಂದ ಗ್ರಾಮದ ಪ್ರಗತಿ ಸಾಧ್ಯ. ರಸ್ತೆಗೆ ಸಂಪರ್ಕವಿರುವ ಭೂಮಿಯ ಮೌಲ್ಯವು ಹೆಚ್ಚಾಗುತ್ತದೆ. ಸುಮಾರು 1.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಸ್ತೆ, ಕಲ್ಲಬೆಟ್ಟು-ಮಾರ್ಪಾಡಿ ಎರಡು ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಿಗಲಿದೆ’ ಎಂದರು. ರಸ್ತೆಗೆ ಜಾಗ ಬಿಟ್ಟು ಕೊಟ್ಟ ಸಾಗಿನಬೆಟ್ಟು ಕುಟುಂಬದವರ ಹಾಗೂ ನಡ್ಯೋಡಿ ದೈವಸ್ಥಾನ ಸಮಿತಿಯವರ ಸಹಕಾರವನ್ನು ಶಾಸಕರು ಶ್ಲಾಘಿಸಿದರು. 

ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭಾ ಸದಸ್ಯರಾದ ಸುಜಾತ ಶಶಿಧರ್ ಕೋಟ್ಯಾನ್, ನಾಗರಾಜ ಪೂಜಾರಿ, ಕುಶಲ ಯಶೋಧರ ದೇವಾಡಿಗ, ಬಿಜೆಪಿ ಪ್ರಮುಖರಾದ ಕೆ.ಆರ್ ಪಂಡಿತ್, ಸುದರ್ಶನ್ ಎಂ, ಪ್ರದೀಪ್ ರೈ, ವಿಠಲ್ ಸಾಲ್ಯಾನ್, ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.

 

Related posts

Leave a Reply

Your email address will not be published. Required fields are marked *