Header Ads
Header Ads
Breaking News

ಕಲ್ಲಮುಂಡ್ಕೂರಿನ ಕಲ್ಲುಕೋರೆ ಮಾಲೀಕರಿಂದ ಹಪ್ತ ವಸೂಲಿ : ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ಪೊಲೀಸ್

ಮೂಡುಬಿದಿರೆ: ಕಳೆದ ಕೆಲವು ವರ್ಷಗಳಿಂದ ಕಲ್ಲಮುಂಡ್ಕೂರಿನಲ್ಲಿ ಕಲ್ಲು ಕೋರೆ ಮಾಲೀಕರಿಂದ ಹಪ್ತಾ ವಸೂಲಿ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ಪೊಲೀಸ್‌ನಿಗೆ ಇಲ್ಲಿನ ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ನಕಲಿ ಪೊಲೀಸ್ ನಾಗೇಶ್ ಮಳಲಿ ಪೊಲೀಸ್ ಬಂಧನಕ್ಕೊಳಗಾದ ವ್ಯಕ್ತಿ. ಈತ ನಾಲ್ಕೈದು ವರ್ಷಗಳಿಂದ ಪೊಲೀಸ್ ಸೋಗಿನಲ್ಲಿ ಬಂದು ಕಲ್ಲಮುಂಡ್ಕೂರು ವ್ಯಾಪ್ತಿಯಲ್ಲಿ ಪರವಾನಿಗೆ ರಹಿತ ಕಾರ್ಯಚರಿಸುತ್ತಿದ್ದ ಕೋರೆಗಳಿಂದ ಹಫ್ತಾ ವಸೂಲಿ ಮಾಡುತಿದ್ದ. ಕೆಲವು ದಿನಗಳ ಹಿಂದಷ್ಟೆ ಇಲ್ಲಿನ ಕಲ್ಲುಕೋರೆಗಳಿಗೆ ಪೊಲೀಸರು ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದರು. ಇದಾದ ಕೆಲವು ದಿನಗಳ ಬಳಿಕ ನಾಗೇಶ್ ಪೊಲೀಸ್ ಹೆಸರಿನಲ್ಲಿ ಹಫ್ತಾ ವಸೂಲಿಗೆ ಬಂದಾಗ ಅನುಮಾನಗೊಂಡ ಕೋರೆ ಮಾಲೀಕರು ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿ ಮತ್ತು ಆತ ಬಳಸಿದ ಪೊಲೀಸ್ ಮಾದರಿಯ ಬೈಕನ್ನು ವಶಪಡಿಸಿಕೊಂಡಿದ್ದರು.

Related posts

Leave a Reply

Your email address will not be published. Required fields are marked *