Header Ads
Breaking News

ಕಲ್ಲಾಪುವಿನಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಯು.ಟಿ ಖಾದರ್

ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ತೊಕ್ಕೊಟ್ಟು ಬಳಿಕ ದೊಡ್ಡ ನಗರವಾಗಿ ಕಲ್ಲಾಪು ಅಭಿವೃದ್ದಿಯಾಗಲಿದ್ದು, ಮುಂದಿನ 15 ವರ್ಷಗಳ ಅಭಿವೃದ್ಧಿ ದೃಷ್ಟಿಕೋನವನ್ನಿಟ್ಟಿಕೊಂಡು ಈ ಕ್ಷೇತ್ರದ ಮೂಲಭೂತ ಸೌಕರ್ಯವನ್ನು ಹಂತ ಹಂತಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಬಳಿ ಕಲ್ಲಾಪುವಿನಿಂದ – ಕಲ್ಲಾಪು ಪಟ್ಲ -ಕುತ್ತಾರು ಸಂಪರ್ಕಿಸುವ 1.5 ಕೋಟಿ ರೂ,ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಂಕ್ರಿಟೀಕರಣ ಮತ್ತು ಕಲ್ಲಾಪುವಿನಲ್ಲಿ ರಿಕ್ಷಾ ಪಾರ್ಕ್ ಉದ್ಘಾಟಸಿ ಮಾತನಾಡಿ ನಗರ ಪ್ರದೇಶದ ಒತ್ತಡಗಳನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ಒಳರಸ್ತೆಯಾದರೂ ಈ ರಸ್ತೆ ಅಭಿವೃದ್ಧಿಯಿಂದ ಕಲ್ಲಾಪು ಪ್ರದೇಶದ ಅನೇಕ ಜನರಿಗೆ ಉಪಯೋಗವಾಗಲಿದೆ. ಅಭಿವೃದ್ಧಿಯಾಗುತ್ತಿರುವ ಉಳ್ಳಾಲ ವ್ಯಾಪ್ತಿಯಲ್ಲಿ ಕಲ್ಲಾಪು ಮುಂದಿನ ದಿನಗಳಲ್ಲಿ ನಗರ ಮತ್ತು ಜನವಸತಿ ಪ್ರದೇಶವಾಗಿ ಅಭಿವೃದ್ಧಿಯ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಹಿರಿಯ ಮುಖಂಡ ಈಶ್ವರ ಉಳ್ಳಾಲ್, ಕೌನ್ಸಿಲರ್ಗಳಾದ ಬಾಝಿಲ್ ಡಿ.ಸೋಜ, ಮುಸ್ತಾಕ್ ಪಟ್ಲ, ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು, ಆಸೀಫ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *