Header Ads
Header Ads
Header Ads
Breaking News

ಕಲ್ಲುಗಣಿಗಾರಿಕೆ, ಮರಳುಗಾರಿಕೆಗೆ ಪರವಾನಿಗೆ ನೀಡುವಂತೆ ಆಗ್ರಹ ಕಾರ್ಕಳದಲ್ಲಿ ಲಾರಿ ಮಾಲಕ ಮತ್ತು ಚಾಲಕರಿಂದ ಪ್ರತಿಭಟನೆ

ಅಧಿಕೃತವಾಗಿ ಕಟ್ಟಡ ಸಾಮಾಗ್ರಿ ಸಾಗಟ ಮಾಡುವ ಹಾಗೂ ಮರಳು ಪರವಾನಿಗೆ ಮತ್ತು ಡೀಮ್ಡ್ ಅರಣ್ಯ ಸಮಸ್ಯೆಯನ್ನು ಸರಿಪಡಿಸಿ ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ಪರವಾನಿಗೆ ನೀಡುವಂತೆ ಆಗ್ರಹಿಸಿ ಸುಮಾರು 400 ವಾಹನಗಳ ಚಾಲಕರು ಕಾರ್ಕಳ ತಾಲೂಕು ಕಛೇರಿ ಎದುರುಗಡೆ ನಿಲ್ಲಿಸಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ಸಂಧರ್ಭದಲ್ಲಿ ಲಾರಿ ಮಾಲಕರು ಹಾಗೂ ಚಾಲಕರ ಸಂಘದ ಉಪಾದ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆ ಮಾತನಾಡಿ, ವಾಹನ ಮಾಲಕರ ಸಮಸ್ಯೆ ಹೇಳತೀರದಾಗಿದೆ. ಬ್ಯಾಂಕ್‌ನವರು ಮತ್ತು ಬಡ್ಡಿಯವರಿಂದ ಸಾಲ ಪಡೆದು ವಾಹನಗಳನ್ನು ಇರಿಸಿಕೊಂಡು ವಾಹನ ಮಾಲಕರು ಬ್ಯಾಂಕ್ ಸಾಲ ತೀರಿಸಲಾಗದೆ ಪರದಾಡುವಂತಾಗಿದೆ. ಕಾರ್ಮಿಕರಿಗೆ ಕೆಲಸವಿಲ್ಲದೆ ಅವರ ಪರಿಸ್ಥಿತಿ ಚಿಂತಜನಕವಾಗಿದೆ. ಮಾಲಕರಿಗೆ ರಾತ್ರಿ ಹಗಲು ನೆಮ್ಮದಿ ಇಲ್ಲದೆ ಭಯದ ವಾತವರಣದಲ್ಲಿ ಬದುಕು ನಮ್ಮದಾಗಿದೆ ಎಂದರು
ನಂತರ ಮಾತನಾಡಿದ ಶಾಸಕ ವಿ ಸುನೀಲ್ ಕುಮಾರ್, ಎಲ್ಲರಿಗೂ ಸಹ ನಮ್ಮ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿವೆ ಲಾರಿ ಚಾಲಕರು ಮತ್ತು ಮಾಲಕರು ಬ್ಯಾಂಕ್‌ನ ಸಾಲ ಕಟ್ಟದೆ ಅತ್ಮಹತ್ಯೆ ಮಾಡುವ ಪರಿಸ್ಥಿತಿ ಉಂಟಾಗಿದೆ ಉಭಯ ಜಿಲ್ಲೆಗಳ ಮರಳು ನೀತಿ ಇದ್ದೆ ಅದನ್ನು ಸರಿ ಪಡಿಸಿಕೊಳ್ಳಬೇಕು ನಾನು ಒಂದು ಎರಡು ದಿನಗಳಲ್ಲಿ ಉಭಯ ಜಿಲ್ಲಾಧಿಕಾರಿಗಳನ್ನು ಕರಿಸಿ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೆನೆ ಎಂದು ಹೇಳಿದರು.
ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply